ಹೊಸದಿಲ್ಲಿ: ದೇಶದಲ್ಲಿ ಸತತ ಎರಡನೇ ವರ್ಷ ವಾಡಿಕೆಯ ಮುಂಗಾರು ಮಳೆ ಬಿದ್ದಿದ್ದು, ಉತ್ತಮ ಬೆಳೆಯಾಗಿದೆ. ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕೃಷಿ ಚಟುವಟಿಕೆಗೆ ಹಿನ್ನೆಲೆಯಾಗಿಲ್ಲ. ಕೃಷಿ ಕ್ಷೇತ್ರ ಆಥಿಕ ಪುನಶ್ಚೇತನಕ್ಕೆ ನೆರವಾಗಿದೆ.
ಈ ವರ್ಷ ಕೂಡ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತಮ ಮಳೆ ಯಾಗಲಿದೆ. ಅಂಕಿ ಅಂಶಗಳ ಪ್ರಕಾರ ಸತತ ಮೂರು ವರ್ಷ ವಾಡಿಕೆಯ ಮಳೆಯಾಗುವುದು ತೀರಾ ಅಪರೂಪ. ಕಳೆದ ಎರಡು 20 ವರ್ಷಗಳಲ್ಲಿ ಒಂದು ಬಾರಿ ಮಾತ್ರ ಸತತ ಮೂರು ವರ್ಷ ವಾಡಿಕೆ ಮಳೆ ಬಿದ್ದಿದೆ. ಆದ್ರೀಗ 2021ರ ಮುಂಗಾರು ಮಳೆ ಕೂಡಾ ಆಶಾದಾಯಕವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆರ್ಥಿಕ ಹಿಂಜರಿತದಿಂದ ಹೊರಬರುವ ಪ್ರಯತ್ನದಲ್ಲಿರುವ ಭಾರತಕ್ಕೆ ಉತ್ತಮ ಮಳೆ ವರದಾನವಾಗಬಲ್ಲದು ಎಂಬುದು ತಜ್ಞರ ಅಭಿಪ್ರಾಯ. ದೇಶದಲ್ಲಿ ಮೂರನೇ ಎರಡರಷ್ಟು ಮಂದಿ ಕೃಷಿ ಆಧಾರಿತ ಆದಾಯವನ್ನು ಅವಲಂಬಿಸಿರುವುದರಿಂದ ಮತ್ತು ಶೇಕಡ 40ರಷ್ಟು ಬಿತ್ತನೆ ಪ್ರದೇಶಕ್ಕೆ ಯಾವುದೇ ನೀರಾವರಿ ಸೌಕರ್ಯ ಇಲ್ಲದಿರುವುದರಿಂದ ದೇಶದಲ್ಲಿ ಉತ್ತಮ ಮುಂಗಾರು ಅನಿವಾರ್ಯವಾಗಿದೆ. ಭತ್ತ, ಕಬ್ಬು, ಹತ್ತಿ, ಬೇಳೆಕಾಳುಗಳು, ತೋಟಗಾರಿಕೆ ಉತ್ಪನ್ನಗಳ ುತ್ತಮ ಮುಂಗಾರು ಮಳೆ ಅಗತ್ಯವಾಗಿದೆ.



