Connect with us

Dvgsuddi Kannada | online news portal | Kannada news online

ಮಾರ್ಚ್ 31ರೊಳಗೆ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಮಾಡದಿದ್ರೆ  ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತೆ ಗೊತ್ತಾ ..?

ಪ್ರಮುಖ ಸುದ್ದಿ

ಮಾರ್ಚ್ 31ರೊಳಗೆ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಮಾಡದಿದ್ರೆ  ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತೆ ಗೊತ್ತಾ ..?

ನವದೆಹಲಿ:  ಆಧಾರ್ ಸಂಖ್ಯೆಯೊಂದಿಗೆ ಕಾಯಂ ಖಾತೆ  (ಪ್ಯಾನ್) ನಂಬರ್ ಲಿಂಕ್  ಮಾಡುವ ಗಡುವು ಹಲವು ಬಾರಿ ವಿಸ್ತರಣೆಯಾದ ಬಳಿಕ ಇದೀಗ ಮಾರ್ಚ್ 31ಕ್ಕೆ ಕೊನೆಯ ದಿನವಾಗಿದೆ. ಒಂದು ವೇಳೆ ಈ ಎರಡೂ ನಂಬರ್ ಜೋಡಣೆ ಮಾಡದೆ ಹೋದರೆ ನೀವು 1,000 ರೂ.ವರೆಗೂ ದಂಡಕ್ಕೆ ಒಳಗಾಗಬಹುದು ಮತ್ತು ನಿಮ್ಮ ಪ್ಯಾನ್ ಸಂಖ್ಯೆ ಕ್ಯಾನ್ಸಲ್ ಆಗುವ ಸಾಧ್ಯತೆ ಕೂಡ ಇದೆ..!

ಲೋಕಸಭೆಯಲ್ಲಿಅನುಮೋದನೆಗೊಂಡ ಹಣಕಾಸು ಮಸೂದೆ 2021ರಲ್ಲಿನ ಹೊಸ ತಿದ್ದುಪಡಿಯಲ್ಲಿ ಈ ನಿಯಮ ಅಳವಡಿಸಲಾಗಿದೆ. ಹಣಕಾಸು ಮಸೂದೆ 2021ಅನ್ನು ಅಂಗೀಕರಿಸುವಾಗ ಸರ್ಕಾರವು 1961ರ ಆದಾಯ ತೆರಿಗೆ ಕಾಯ್ದೆಗೆ ಹೊಸ ಸೆಕ್ಷನ್ (ಸೆಕ್ಷನ್ 234ಎಚ್) ಅಳವಡಿಸಿದೆ. ಇದರ ಪ್ರಕಾರ 2021ರ ಮಾರ್ಚ್ 31ರ ಒಳಗೆ ಪ್ಯಾನ್ ಸಂಖ್ಯೆಯನ್ನು  ಆಧಾರ್ ಜತೆ ಜೋಡಣೆ ಮಾಡದಿದ್ದರೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.

ದಂಡ ಇಲ್ಲವೆಂದರೆ  ಪ್ಯಾನ್ ನಂಬರ್ ಕ್ಯಾನ್ಸಲ್  ಆಗಲಿದೆ. ಇದರಿಂದ ಪ್ಯಾನ್ ಅಗತ್ಯವಿರುವ ಕಡೆಗಳಲ್ಲಿ  ಹಣಕಾಸು ವ್ಯವಹಾರ ನಡೆಸುವುದು ಸಾಧ್ಯವಾಗುವುದಿಲ್ಲ. ಪ್ಯಾನ್-ಆಧಾರ್ ಜೋಡಣೆಯಲ್ಲಿ ವಿಫಲವಾದರೆ ವಿಧಿಸುವ ದಂಡ 1,000 ರೂ.ವಿಧಿಸಲುಬಹುದು.  ಈ ಎರಡೂ ಕಾರ್ಡ್‌ಗಳ ಜೋಡಣೆಗೆ ಸರ್ಕಾರ ಅನೇಕ ಬಾರಿ ಗಡುವುಗಳನ್ನು ವಿಸ್ತರಿಸಿತ್ತು. ಆದರೆ ಈ ಬಾರಿ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲ. ಜತೆಗೆ ಪ್ರಕ್ರಿಯೆ ಪೂರ್ಣಗೊಳಿಸದವರಿಗೆ ದಂಡ ವಿಧಿಸಲು ಬಯಸಿದೆ. ಪ್ಯಾನ್ ಅಮಾನ್ಯಗೊಂಡರೆ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಹ ಸಾಧ್ಯವಾಗುವುದಿಲ್ಲ.

ಪ್ಯಾನ್  ಬಂಬರ್ ಇಲ್ಲವೆಂದರೆ ಟಿಡಿಎಸ್‌ನಲ್ಲಿ ಅಧಿಕ ಪ್ರಮಾಣದ ಕಡಿತಕ್ಕೆ ಕಾರಣವಾಗಲಿದೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ ಪ್ಯಾನ್ ನೀಡದವರು ಅಥವಾ ನಿಷ್ಕ್ರಿಯ ಪ್ಯಾನ್ ನೀಡುವವರು ಅಧಿಕ ಟಿಡಿಎಸ್ ಅಥವಾ ಟಿಸಿಎಸ್ ವಿಧಿಸಲಾಗುತ್ತದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top