ಬಾಗಲಕೋಟೆ: ಮುಧೋಳ ನಗರದ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮಲಗಿದ್ದ ತಹಸೀಲ್ದಾರ್ ಸಂಗಮೇಶ್ ಬಾಡಗಿ(38) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಂಗಮೇಶ್ ಬಾಡಗಿ ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಅಥಣಿ ತಾಲೂಕಿನ ಜನವಾಡ ಮೂಲದ ಸಂಗಮೇಶ್ ಬಾಡಗಿ ಅವರು ಮೂರು ವರ್ಷದಿಂದ ಮುಧೋಳ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಗಮೇಶ್ ಬಾಡಗಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಧೋಳ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ಧಾರೆ.