ನವದೆಹಲಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ 7 ಕ್ಷೇತ್ರಗಳ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್, 2ನೇ ಪಟ್ಟಿಯಲ್ಲಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಇಂದು (ಮಾ.21) ಸಂಜೆ ಘೋಷಿಸಿದೆ. ಈ ಮೂಲಕ ದಾವಣಗೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನಗೆ ಟಿಕೆಟ್ ಸಿಕ್ಕಿದೆ. ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶರ ಪತ್ನಿ ಗಾಯತ್ರಿ ಸಿದ್ದೇಶ್ವರಗ ಬಿಜೆಪಿಯಿಂದ ಎದುರಾಳಿಯಾಗಿದ್ದಾರೆ. ಇನ್ನೂ ದಾವಣಗೆರೆ ಕಾಂಗ್ರೆಸ್ ನಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಯುವ ಮುಖಂಡ ಬಿ.ಜಿ. ವಿನಯ್ ಕುಮಾರ್ ಗೆ ತೀವ್ರ ಹಿನ್ನೆಡೆಯಾಗಿದೆ.
- 17 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
- ಚಿಕ್ಕೋಡಿ- ಪ್ರಿಯಾಂಕ್ ಜಾರಕಿಹೊಳಿ
- ಬೆಳಗಾವಿ- ಮೃಣಾಲ್ ರವೀಂದ್ರ ಹೆಬ್ಬಾಳ್ಕರ್
- ಬಾಗಲಕೋಟೆ- ಸಂಯುಕ್ತ ಎಸ್. ಪಾಟೀಲ
- ಗುಲಬರ್ಗ (ಪರಿಶಿಷ್ಟ ಜಾತಿ)- ಎಸ್.ಸಿ.ರಾಧಾಕೃಷ್ಣ
- ರಾಯಚೂರು (ಪರಿಶಿಷ್ಟ ಪಂಗಡ)- ಜಿ. ಕುಮಾರ ನಾಯ್ಕ್
- ಬೀದರ್- ಸಾಗರ್ ಖಂಡ್ರೆ
- ಕೊಪ್ಪಳ- ಕೆ. ರಾಜಶೇಖರ ಬಸವರಾಜ ಹಿಟ್ನಾಳ
- ಧಾರವಾಡ- ವಿನೋದ ಅಸೂಟಿ
- ಉತ್ತರ ಕನ್ನಡ- ಡಾ. ಅಂಜಲಿ ನಿಂಬಾಳ್ಕರ್
- ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ
- ಉಡುಪಿ ಚಿಕ್ಕಮಗಳೂರು- ಡಾ. ಜಯಪ್ರಕಾಶ್ ಹೆಗ್ಡೆ
- ದಕ್ಷಿಣ ಕನ್ನಡ- ಪದ್ಮರಾಜ
- ಚಿತ್ರದುರ್ಗ (ಪರಿಶಿಷ್ಟ ಜಾತಿ)- ಬಿ.ಎನ್.ಚಂದ್ರಪ್ಪ
- ಮೈಸೂರು- ಎಂ. ಲಕ್ಷ್ಮಣ್
- ಬೆಂಗಳೂರು ಉತ್ತರ- ಪ್ರೊ. ಎಂ.ವಿ.ರಾಜೀವ್ ಗೌಡ
- ಬೆಂಗಳೂರು ಕೇಂದ್ರ- ಮನಸೂರ್ ಅಲಿ ಖಾನ್
- ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ
- ಬಳ್ಳಾರಿ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಕಿ