ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಕಡಿಮೆ ಮಾಡಿದ ನಂತರ, ಇದೀಗ ಎಲ್ ಪಿಜಿ (LPG) ಸಿಲಿಂಡರ್ ಬೆಲೆ ಕಡಿಮೆ ಮಾಡಿದೆ. ಇಂದಿನಿಂದ (ಜೂನ್ 1) 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 135 ರೂ.ಗಳಷ್ಟು ಕಡಿಮೆಯಾಗಿದೆ.
ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2354 ರೂ.ಗಳ ಬದಲು 2219 ರೂ., ಕೋಲ್ಕತಾದಲ್ಲಿ 2322 ರೂ., ಮುಂಬೈನಲ್ಲಿ 2171.50 ರೂ., ಚೆನ್ನೈನಲ್ಲಿ 2373 ರೂ.ಗೆ ಇಳಿಕೆಯಾಗಿವೆ. ಕಂಪನಿಗಳಿಂದ ಗೃಹ ಬಳಕೆ ಎಲ್ ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹಿಂದೆ ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್ ಗೆ 200 ರೂ.ಗಳ ಸಬ್ಸಿಡಿಯನ್ನು ಸರ್ಕಾರ ಘೋಷಿಸಿತ್ತು. ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.



