ನವದೆಹಲಿ: ತೈಲ ಉತ್ಪಾದನಾ ಕಂಪನಿಗಳು ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಂದು (ಮೇ 7) ಮತ್ತೆ ಹೆಚ್ಚಳ ಮಾಡಲಾಗಿದೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ದರ 50 ರೂ. ಹೆಚ್ಚಾಗಿದ್ದು, ಇದೀಗ ಸಿಲಿಂಡರ್ ದರ ಒಂದು ಸಾವಿರ ರೂ. ಗಡಿ ದಾಟಿದಂತಾಗಿದೆ. ಈ ತಿಂಗಳ ಮೊದಲ ದಿನ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 102.50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ಗೃಹ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ಜನ ಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.
ಗೃಹ ಬಳಕೆ ಸಿಲಿಂಡರ್ ಈ ಹಿಂದೆ ಮಾರ್ಚ್ 2022 ರಲ್ಲಿ ರೂ 50 ಹೆಚ್ಚಿಸಲಾಗಿದ್ದು, ಬೆಂಗಳೂರಲ್ಲಿ 952.50 ರೂ. ದರ ಇತ್ತು. ಇದೀಗ 50 ರೂಪಾಯಿ ಹೆಚ್ಚಳದಿಂದ 1,002.50 ಹೆಚ್ಚಳವಾಗಿದೆ. ಇದರಿಂದ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿದಂತಾಗಿದೆ.ವಾಣಿಜ್ಯ ಬಳಖೆ 19 ಕೆ.ಜಿ. ಸಿಲಿಂಡರ್ ದರ 2253 ರೂ.ಗೆ ತಲುಪಿದೆ.



