ನವದೆಹಲಿ: ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮತ್ತೊಮ್ಮೆ ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ. ಈ ತಿಂಗಳಲ್ಲಿಯೇ ಎರಡು ಬಾರಿ ಬೆಲೆ ಏರಿಕೆಯಾಗಿದೆ.
ಇಂದು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು 3.50 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯನ್ನು 8 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ, ದೇಶೀಯ ಸಿಲಿಂಡರ್ ಈಗ ದೇಶಾದ್ಯಂತ ಎಲ್ಲ ನಗರಗಳಲ್ಲಿ 1000 ರೂ.ಗಡಿ ದಾಟಿದೆ.
ದೆಹಲಿ ಮತ್ತು ಮುಂಬೈನಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 1003 ರೂ., ಕೋಲ್ಕತಾದಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1029 ರೂ., ಚೆನ್ನೈನಲ್ಲಿ ಇಂದಿನಿಂದ 1018.5 ರೂ. ಇದೆ.
ಇದಕ್ಕೂ ಮೊದಲು ಮೇ 7 ರಂದು ಗೃಹ ಬಳಖೆ ಸಿಲಿಂಡರ್ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಗೃಹಬಳಕೆಯ ಸಿಲಿಂಡರ್ ಜೊತೆಗೆ, ಕಮರ್ಷಿಯಲ್ ಸಿಲಿಂಡರ್ ಕೂಡ ಮೇ 1ರಂದು ದುಬಾರಿಯಾಗಿತ್ತು.