ನವದೆಹಲಿ: ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 36 ರೂಪಾಯಿ ಇಳಿಕೆಯಾಗಿದೆ.
ಇಂಡಿಯನ್ ಆಯಿಲ್ ಇಂದು (ಆಗಸ್ಟ್ 1) ಬಿಡುಗಡೆ ಮಾಡಿದ ಹೊಸ ದರದ ಪ್ರಕಾರ, ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 36 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಈ ದರದ ನಂತರ ವಾಷಿಜ್ಯ ಬಳಕೆ ಸಿಲಿಂಡರ್ ಬೆಲೆ ನವ ದೆಹಲಿಯಲ್ಲಿ 2012.50 ರೂ.ಯಿಂದ 1976.50 ಆಗಿದೆ. ಸದ್ಯ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ 14 ಕೆಜಿ ಸಿಲಿಂಡರ್ ಬೆಲೆ 1068.50 ಇದೆ.



