ಬೆಂಗಳೂರು : ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಕೊಟ್ಟಿದ್ದ ಡೆಡ್ ಲೈನ್ ನಲ್ಲಿ ಅರ್ಧ ಅವಧಿ ಮುಕ್ತಾಯಗೊಂಡಿದ್ದು, ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಸಾರಿಗೆ ನೌರರ ಒಕ್ಕೂಟ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ನಲ್ಲಿ ಬಸ್ ಬಂದ್ ಮಾಡಿದ್ದ ಸಾರಿಗೆ ನೌಕರರಿಗೆ ಸರ್ಕಾರ ಲಿಖಿತ ಭರವಸೆ ಕೊಟ್ಟಿತ್ತು. ಬಂದ್ ಹಿಂಪಡೆದು 2 ತಿಂಗಳಾದ್ರು ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಮತ್ತೆ ಸಾರಿಗೆ ಬಂದ್ ಮಾಡುವ ಎಚ್ಚರಿಕೆ ನೀಡಿದರು..
ಈ ಹಿಂದೆ ಹೋರಾಟದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ 3 ತಿಂಗಳು ಸಮಯ ಕೊಟ್ಟಿದ್ದೇವು. 3 ತಿಂಗಳಲ್ಲಿ ಒಂದೂವರೆ ತಿಂಗಳು ಮುಗಿದಿದ್ದು, ಇನ್ನೂ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಮತ್ತೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಸಾರಿಗೆ ನೌಕರರು 9 ಬೇಡಿಕೆಗಳ ಪೈಕಿ 3 ಬೇಡಿಕೆ ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಹೇಳಿದ್ದಾರೆ.



