ಬೆಂಗಳೂರು: ಬಿಜೆಪಿ ನಾಯಕರು ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಭೇದವನ್ನು ಹುಟ್ಟು ಹಾಕುತ್ತಿದ್ದಾರೆ. ಪ್ರಾಧಿಕಾರಗಳ ಸ್ಥಾಪನೆ ರಾಜಕೀಯ ದುರುದ್ದೇಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಧರ್ಮವಿರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂಬ ಮಾತಿದೆ. ಆದರೆ ರಾಜ್ಯ ಸರ್ಕಾರದ ಕ್ರಮ ಧರ್ಮದಲ್ಲಿ ರಾಜಕಾರಣವಾಗಿದೆ ಎಂದರು.
ಮರಾಠ ಪ್ರಧಿಕಾರದ ರಚನೆ ವಿಚಾರವಾಗಿ ನಾನು ಈಗ ಮಾತನಾಡಲ್ಲ. ಆದರೆ ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡಿ, ಎಲ್ಲಾ ಜಾತಿಗಳನ್ನು ಬೇರ್ಪಡಿಸಲು ಹೊರಟಿರುವುದು ಸರಿಯಲ್ಲ ಎಂದರು.