ಬೆಂಗಳೂರು: ಆರನೇ ವೇತನ ಆಯೋಗಕ್ಕೆ ಆಗ್ರಹಿಸಿ ಸಾರಿಗೆ ನೌಕರರ ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ. ಏಪ್ರಿಲ್ 07 ರಿಂದ ಪ್ರಾರಂಭವಾದ ಪ್ರತಿಭಟನೆಯಿಂದ ಇದುವರೆಗೆ ನಾಲ್ಕು ನಿಗಮದ 54 ಬಸ್ ಗಳು ಹಾನಿಗೆ ಒಳಗಾಗಿದ್ದು, 72 ಎಫ್ ಐಆರ್ ದಾಖಲಾಗಿದೆ.
ಇಂದು ಕೂಡ ಸಾರಿಗೆ ನೌಕರರ ಪ್ರತಿಭಟನೆ ಮುಂದುವರೆದಿದ್ದು, ಇಲ್ಲಿವರೆಗೆ ksrtc 29,bmtc 03, neksrtc 20, nwksrtc 2 ಸೇರಿ ಒಟ್ಟು 54 ಬಸ್ ಗಳು ಹಾನಿಯಾಗಿದ್ದು, ಪ್ರತಿಭಟನೆ ನಿರತರ ವಿರುದ್ಧ 72 ಕೇಸ್ ಗಳು ದಾಖಲಾಗಿವೆ. ಇದರಲ್ಲಿ 115 ನೌಕರರು ಭಾಗಿಯಾಗಿದ್ದಾರೆ. 19 ಮಂದಿಯನ್ನು ಬಂಧಿಸಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.



