ದಾವಣಗೆರೆ: ಸರ್ಕಾರದ ಮಹತ್ವ ಯೋಜನೆಯಾದ ಯುವನಿಧಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ, ಡಿಪ್ಲೋಮಾ ಪಡೆದಿರಬೇಕು. ಅಂದರೆ 2023ನೇ ವರ್ಷದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಂತಹವರು ಸೇವಾಸಿಂಧು ಜಾಲತಾಣ https://sevasindhugs.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರ್ಜಿದಾರರು ನ್ಯಾಶನಲ್ ಅಕ್ಯಾಡೆಮಿಕ ಡೆಪೊಸೆಟರಿ (NAD Portal) ಪೋರ್ಟಲ್‍ನ ಜಾಲತಾಣ https://nad.karnataka.gov.in ದಲ್ಲಿ ವಿಶ್ವವಿದ್ಯಾನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಮಂಡಳಿಗಳು ಪ್ರವೇಶಾತಿ ಸಂದರ್ಭದಲ್ಲಿ ನೀಡುವ ಪದವಿ, ಡಿಪ್ಲೋಮಾ, ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳ ಮೇಲೆ ನಮೂದಿಸಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ದತ್ತಾಂಶವು ಲಭ್ಯವಿದೆಯೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು.
ನೊಂದಣಿ ಸಂಖ್ಯೆ ಇಲ್ಲದೇ ಇದ್ದಲ್ಲಿ NAD Portal ನಲ್ಲಿ ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಥವಾ ತಮಗೆ ಸಂಬಂಧಿಸಿದ ಕಾಲೇಜು, ಬೋರ್ಡ್, ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ, ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಅಭ್ಯರ್ಥಿಗಳು ಯುವನಿಧಿಯ ನೋಂದಣಿ ಮಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ತಮಗೆ ಹತ್ತಿರದ ಗ್ರಾಮ ಒನ್ ಕೇಂದ್ರಗಳು ಹಾಗೂ ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



