ವಿಜಯನಗರ; ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಹೊರ ವಲಯದಲ್ಲಿ ತೋಳದ ದಾಳಿ ಮಾಡಿದ್ದು, 25 ಕುರಿಮರಿಗಳು ಸಾವನ್ನಪ್ಪಿವೆ. ಐದು ಕುರಿಮರಿ ತೀವ್ರ ಗಾಯಗೊಂಡಿವೆ.
ಗ್ರಾಮದ ಬಿಂಗಿ ಭೀಮಪ್ಪ ಹಾಗೂ ಹನುಮಂತಪ್ಪ ಅವರ ಹಟ್ಟಿ ಮೇಲೆ ದಾಳಿ ಮಾಡಿದ ತೋಳ, 25 ಕುರಿ ಮರಿ ಕೊಂದು ಹಾಕಿದೆ. ಕುರಿಗಾಯಿಗಳಿಗೆ ಅಂದಾಜು 1 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.



