Connect with us

Dvgsuddi Kannada | online news portal | Kannada news online

ರಾಜ್ಯದ 1,500 ಪಿಡಿಒಗಳಿಗೆ ಮುಂಭಡ್ತಿ

govt

ಪ್ರಮುಖ ಸುದ್ದಿ

ರಾಜ್ಯದ 1,500 ಪಿಡಿಒಗಳಿಗೆ ಮುಂಭಡ್ತಿ

ಬೆಂಗಳೂರು: ರಾಜ್ಯ ಸರಕಾರ 1,500 ಪಿಡಿಒ( ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಹುದ್ದೆಗಳನ್ನು ಹಿರಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂದು ಮುಂಭಡ್ತಿ ನೀಡಿ ಸುತ್ತೋಲೆ ಹೊರಡಿಸಿದೆ.

2010ನೇ ಸಾಲಿನಲ್ಲಿ ನೇಮಕವಾದ ಪಿಡಿಒಗಳಿಗೆ ಒಂದು ಮುಂಭಡ್ತಿ ದೊರೆ ಯದ ಹಿನ್ನೆಲೆಯಲ್ಲಿ ಒಟ್ಟು 6,071 ಹುದ್ದೆಗಳ ಪೈಕಿ 1,500 ಹುದ್ದೆಗಳನ್ನು ವೇತನ ಶ್ರೇಣಿ 40,900-78,200 (ಗ್ರೂಪ್‌ ಬಿ ಕಿರಿಯ ವೃಂದ)ರೂ.ಹೊಂದಿರುವ ಹಿರಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಿದೆ.

ಉಳಿದ 4,571 ಪಿಡಿಒ ಹುದ್ದೆಗಳನ್ನು ವೇತನ ಶ್ರೇಣಿ 37,900 ರೂ.ಗಳಿಂದ 70,850 ರೂ.ರಲ್ಲಿಯೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

2010ನೇ ಸಾಲಿನಲ್ಲಿ ಒಟ್ಟು 2,500 ಪಿಡಿಒಗಳನ್ನು ನೇರ ನೇಮಕ ಮಾಡಲಾಗಿತ್ತು. ಕಳೆದ 12 ವರ್ಷಗಳ ಅವಧಿ ಯಲ್ಲಿ 613 ಪಿಡಿಒಗಳಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top