ಬೆಂಗಳೂರು: ರಾಜ್ಯ ಸರಕಾರ 1,500 ಪಿಡಿಒ( ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಹುದ್ದೆಗಳನ್ನು ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂದು ಮುಂಭಡ್ತಿ ನೀಡಿ ಸುತ್ತೋಲೆ ಹೊರಡಿಸಿದೆ.
2010ನೇ ಸಾಲಿನಲ್ಲಿ ನೇಮಕವಾದ ಪಿಡಿಒಗಳಿಗೆ ಒಂದು ಮುಂಭಡ್ತಿ ದೊರೆ ಯದ ಹಿನ್ನೆಲೆಯಲ್ಲಿ ಒಟ್ಟು 6,071 ಹುದ್ದೆಗಳ ಪೈಕಿ 1,500 ಹುದ್ದೆಗಳನ್ನು ವೇತನ ಶ್ರೇಣಿ 40,900-78,200 (ಗ್ರೂಪ್ ಬಿ ಕಿರಿಯ ವೃಂದ)ರೂ.ಹೊಂದಿರುವ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಿದೆ.
ಉಳಿದ 4,571 ಪಿಡಿಒ ಹುದ್ದೆಗಳನ್ನು ವೇತನ ಶ್ರೇಣಿ 37,900 ರೂ.ಗಳಿಂದ 70,850 ರೂ.ರಲ್ಲಿಯೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2010ನೇ ಸಾಲಿನಲ್ಲಿ ಒಟ್ಟು 2,500 ಪಿಡಿಒಗಳನ್ನು ನೇರ ನೇಮಕ ಮಾಡಲಾಗಿತ್ತು. ಕಳೆದ 12 ವರ್ಷಗಳ ಅವಧಿ ಯಲ್ಲಿ 613 ಪಿಡಿಒಗಳಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಲಾಗಿದೆ.



