ಬೆಂಗಳೂರು : ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಫೆಬ್ರವರಿ 2021ರಿಂದ ನೇರ ನೇಮಕಾತಿ ಮೂಲಕ ಅತಿಥಿ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ.
ಮೇ-2021ರವರೆಗೆ 3,473 ಅತಿಥಿ ಶಿಕ್ಷಕರನ್ನು ಜಿಲ್ಲಾವಾರು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಸಾರ್ವತ್ರಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾವಾರು ಖಾಲಿ ಇರುವ ನೇಮಕಾತಿ ಆದೇಶವನ್ನು ಹೊರಡಿಸಿಲಾಗಿದೆ. ಹುದ್ದೆಗೆ ನಿಗದಿಪಡಿಸಿದ್ದು, ಇದು ಕೇವಲ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಲು ನೇಮಕ ಮಾಡಿಕೊಳ್ಳಲಾಗುವುದು. ಜಿಲ್ಲಾವಾರು ಖಾಲಿ ಇರುವ ಅತಿಥಿ ಶಿಕ್ಷರ ವಿವರ ಹಾಗೂ ನೇಮಕಾತಿಗೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ ನೋಡಿ






