ತರಳಬಾಳು ಹುಣ್ಣಿಮೆ ಮಹೋತ್ಸವ; ಭಜನಾ ಸ್ಪೆರ್ಧೆಗೆ ಆಹ್ವಾನ; 10 ಸಾವಿರ ಪ್ರಥಮ ಬಹುಮಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಭದ್ರಾವತಿಯಲ್ಲಿ ಈ ಬಾರಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-2026 ಅಂಗವಾಗಿ ಭಜನಾ ಸ್ಪೆರ್ಧೆ ಆಯೋಜಿಸಲಾಗಿದೆ. 10 ಸಾವಿರ ಪ್ರಥಮ ಬಹುಮಾನವಾಗಿದೆ.

ಜಾಗತೀಕರಣ ಮತ್ತು ಆಧುನಿಕ ಜೀವನ ಶೈಲಿಯಿಂದ ಕಣ್ಮರೆಯಾಗುತ್ತಿರುವ ಜನಪದ ಕಲೆಗಳನ್ನು ಪೋಷಿಸುವ ಉದ್ದೇಶದಿಂದ ತರಳಬಾಳು ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ತರಳಬಾಳು ಜಗದ್ಗುರು ಶ್ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅವರ ಮಾರ್ಗದರ್ಶನದಂತೆ ಅಣ್ಣನ ಬಳಗವು ಪ್ರತಿ ವರ್ಷ ಭಜನಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿರುತ್ತದೆ. ಭಜನಾ ತಂಡಗಳಿಂದ ಅರ್ಜಿ ಆಹ್ವಾನಿಸಿದ್ದು, ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ, ಶಿವಮೊಗ್ಗ ತಾಲ್ಲೂಕುಗಳಿಗೆ ಮಾತ್ರ ಸರ್ಧೆಯಲ್ಲಿ ಭಾಗವಹಿಸಬಹುದು.

ದಾವಣಗೆರೆ; ಫೆ.24,25 ರಂದು ನಗರ ದೇವತೆ ದುಗ್ಗಮ್ಮ ಜಾತ್ರೆ; ವಿಜೃಂಭಣೆಯಿಂದ ಆಚರಿಸಲು ತೀರ್ಮಾನ

ಭಕ್ತಿ, ಜ್ಞಾನ ಮತ್ತು ಕ್ರಿಯೆಗಳ ತ್ರಿವೇಣಿ ಸಂಗಮವಾಗಿರುವ ಭಜನಾ ಸ್ಪರ್ಧೆಯು ಕಳೆದ 40 ವರ್ಷಗಳಿಂದ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಹಾಗೂ ಕಳೆದ ನಾಲ್ಕು ವರ್ಷಗಳಿಂದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಡೆಯುತ್ತಿದ್ದು ನೂರಾರು
ಸಂಖ್ಯೆಯ ಭಜನಾ ತಂಡಗಳು ಭಾಗವಹಿಸುವುದರ ಮೂಲಕ ಸ್ಪೂರ್ತಿ ಪಡೆದಿವೆ. ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಶ್ರದ್ಧಾಭಕ್ತಿ ಸಮರ್ಪಣೆ ಮಾಡಿ ತಮ್ಮ ಭಜನಾ ಕಲೆಯನ್ನು ಪುನಶ್ಚತನಗೊಳಿಸಿಕೊಳ್ಳಬೇಕಾಗಿ ಕೋರುತ್ತೇವೆ.

ದಾವಣಗೆರೆ: ಜಿಲ್ಲೆಗೆ ಎರಡು ಶ್ರಮಿಕ ವಸತಿ ಶಾಲೆ ಮಂಜೂರು

ಭಜನಾ ಸ್ಪರ್ಧೆಯ ನಿಯಮಗಳು

1. ಭಜನಾ ಸ್ಪರ್ಧೆಯು ದಿನಾಂಕ 25-1-2026 ರ ಭಾನುವಾರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾಮಂಟಪದ ಮುಖ್ಯ ವೇದಿಕೆಯಲ್ಲಿ ನಡೆಸಲಾಗುವುದು.

2. ಭಜನಾ ತಂಡದವರು ತಮ್ಮ ತಂಡದ ಹೆಸರನ್ನು ದಿನಾಂಕ: 18-1-2026 ರೊಳಗೆ ನೊಂದಾಯಿಸಿಕೊಳ್ಳಬೇಕು

3. ಒಂದು ಭಜನಾ ತಂಡದಲ್ಲಿ ಕಲಾವಿದರ ಸಂಖ್ಯೆ ಕನಿಷ್ಟ 6 ಗರಿಷ್ಟ 12 ಇರಬೇಕು.

4. ಭಜನೆಯಲ್ಲಿ ಯಾವುದೇ ದಾಸರ ಪದಗಳನ್ನು, ಕಿರ್ತನೆಗಳನ್ನು, ಶಿವಶರಣರ ವಚನಗಳನ್ನು ಹಾಗೂ ಭಜನಾ
ಪದಗಳನ್ನು ಹಾಡಲು ಅವಕಾಶವಿರುತ್ತದೆ.

5. ಈ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದವರಿಗೆ ಎರಡು ಭಜನಾ ಪದಗಳನ್ನು ಹಾಡಲು ಮಾತ್ರ
ಅವಕಾಶವಿರುತ್ತದೆ. ಮತ್ತು ಸಮಯಾವಕಾಶ 8 ನಿಮಿಷಗಳು ಮಾತ್ರ.

6. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ಭಜನಾ ತಂಡಕ್ಕೆ ಬಂದು ಹೋಗುವ ಬಸ್ ಚಾರ್ಜನ್ನು
ಕೊಡಲಾಗುವುದು.

7. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

8. ಭಜನಾ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ (10,000/-) ದ್ವಿತೀಯ (8,000/-) ತೃತೀಯ (6,000/-)
ರೂಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

9. ತೀರ್ಪು ನೀಡುವಾಗ ಭಜನೆ ಆರಂಭ, ಭಜನಾ ಸಂಪ್ರದಾಯದ ಸಮವಸ್ತ್ರ, ಭಜನಾ ಹಾಡಿನ ಆಯ್ಕೆ, ರಾಗ, ತಾಳ, ಲಯ, ತಂಡದ ಕ್ರಿಯಾಶೀಲತೆ ಹಾಗೂ ಭಜನೆಯ ಮುಕ್ತಾಯ ಇತ್ಯಾದಿ ಅಂಶಗಳನ್ನು ಗಮನಿಸಿ ಅಂಕಗಳನ್ನು
ನೀಡಲಾಗುವುದು.

10. ತೀರ್ಪುಗಾರರ ತೀರ್ಮಾನವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಹರೋನಹಳ್ಳಿ ಸ್ವಾಮಿ
7892154695

ನಂದಿನಿ
9538437779

ಯು ಚಂದ್ರಪ್ಪ
9972531504

ಮಂಜುನಾಥ ಬಿ.ಜಿ
8880275276

ನಾಗರಾಜ್ ಎಂ.ಎನ್
8073917706

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *