ಪ್ರಮುಖ ಸುದ್ದಿ
ರೈತರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ; ಕೃಷಿ ಜಮೀನು ಸರ್ವೇ, ಪೋಡಿ, ಹದ್ದುಬಸ್ತು, ಭೂ ಪರಿವರ್ತನೆ ಶುಲ್ಕ ಇಳಿಕೆ ಮಾಡಿ ಆದೇಶ….

ಬೆಂಗಳೂರು: ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಹೊಸ ವರ್ಷದ ಕೊಡುಗೆ ನೀಡಿದ್ದು ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು, ಭೂ ಪರಿವರ್ತನೆ ಸೇವಾ ಶುಲ್ಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್) ಸಲ್ಲಿಸುವ ಪ್ರತಿ ಅರ್ಜಿಗೆ ನಿಗದಿ ಪಡಿಸಿದ ಶುಲ್ಕ ಪರಿಷ್ಕರಿದಲಾಗಿದೆ. ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಸಹ ಇಳಿಕೆಯಾಗಿದೆ.
ಜಮೀನು ನಕ್ಷೆ ಸೇವಾ ಶುಲ್ಕ ಇಳಿಕೆ: ಸ್ವಾವಲಂಬಿ ಯೋಜನೆ ಅಡೆ ನಿಗದಿ11-ಇ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ ಪೂರ್ವನಕ್ಷೆ ಪರಿಷ್ಕೃತ ದರ
ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್) ಸಲ್ಲಿಸುವ ಪ್ರತಿ ಅರ್ಜಿಗೆ ನಿಗದಿ ಪಡಿಸಿದ ಪರಿಷ್ಕೃತ ಶುಲ್ಕ ಈ ಕೆಳಗಿನಂತಿದೆ.#surveying #landsurvey pic.twitter.com/vh9lfmeZgn
— DIPR Karnataka (@KarnatakaVarthe) January 3, 2024
ಸಾರ್ವಜನಿಕರು ತಮ್ಮ ಜಮೀನ ವಿಸ್ತೀರ್ಣ ಕಡಿಮೆ ಇದ್ದು, ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ, 2023 ರ ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಜಿ ಶುಲ್ಕ ಹೆಚ್ಚಾಗಿರುವ ಕುರಿತು ಮಾನ್ಯ ಸದಸ್ಯರುಗಳು ಸದನದಲ್ಲಿ ಪ್ರಸ್ತಾಪಿಸಿರುತ್ತಾರೆ. ಜೊತೆಗೆ, ಅರ್ಜಿದಾರರು / ಜನಪ್ರತಿನಿಧಿಗಳಿಂದಲೂ ಸಹ ಪೋಡಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಹ ಸ್ವೀಕೃತವಾಗಿರುತ್ತವೆ.
ಈ ಮೇಲ್ಕಂಡ ಎಲ್ಲಾ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜೊತೆಗೆ ಪರವಾನಗಿ ಭೂಮಾಪಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ಪಾವತಿಸುವ ಶುಲ್ಕದಿಂದಲೇ ನಿಗಧಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ.
ಪ್ರಸ್ತುತ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಬಹುಮಾಲೀಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕ ರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಜಾರಿಯಲ್ಲಿರುತ್ತದೆ. ಇದಲ್ಲದೆ ಅಲಿನೇಷನ್, ದರಖಾಸ್ತು ಪೋಡಿಗೆ ಸಂಬಂಧಿಸಿದಂತೆ ಮಂಜೂರಿ ಸಮಯದಲ್ಲಿಯೇ ಅರ್ಜಿದಾರರಿಂದ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
ಈ ರಾಶಿಯವರು ಯೋಚಿಸಿರುವ ಕೆಲಸದಲ್ಲಿ ಜಯ, ಈ ರಾಶಿಯವರಿಗೆ ಸರಕಾರಿ ಉದ್ಯೋಗ ಪ್ರಾಪ್ತಿ, ಶುಕ್ರವಾರದ ರಾಶಿ ಭವಿಷ್ಯ 01 ಆಗಸ್ಟ್ 2025...
ಈ ರಾಶಿಯವರಿಗೆ ಕುಟುಂಬ ಕಲಹಗಳಿಂದ ಮುಕ್ತಿ ಸಿಗುವುದು! ಈ ರಾಶಿಯವರು ಇಷ್ಟಪಟ್ಟವರ ಜೊತೆ ಮದುವೆ ಗ್ಯಾರಂಟಿ. ಗುರುವಾರದ ರಾಶಿ ಭವಿಷ್ಯ 31...
ದಾವಣಗೆರೆ: ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ 10 ಖಾಯಂ ಚಾಲಕ ಹುದ್ದೆಗಳಿಗಾಗಿ 43 ವರ್ಷದೊಳಗಿನ ಶೇಪ್-1 ಮೆಡಿಕಲ್ ಕ್ಯಾಟಗೆರಿ ಹೊಂದಿರುವ...
ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ಕಳೆದ ಒಂದು ತಿಂಗಳಿಂದ ಸ್ಥಿರತೆ ಕಾಯ್ದುಕೊಂಡು ಬಂದಿದೆ. ಜುಲೈ...
ಈ ರಾಶಿಯವರಿಗೆ ಹಿತಾಷಿಗಳಿಂದಲೇ ಮದುವೆ ವಿಳಂಬ, ಹಿತೈಷಿಗಳೇ ಶತ್ರುಗಳು, ಬುಧವಾರದ ರಾಶಿ ಭವಿಷ್ಯ 30 ಜುಲೈ 2025 ಸೂರ್ಯೋದಯ – 5:58...