ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ರಾಜ್ಯದ ಹಾವೇರಿಯ ಜಿಲ್ಲೆಯ ವೈದ್ಯಕೀಯ ನವೀನ್ ಬಲಿಯಾಗಿದ್ದಾರೆ. ನವೀನ್ ಮೃತದೇಹ ಹೋಲುವ ಕೆಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಂದಿದೆ. ಈ ಬಗ್ಗೆ ಭಾರತದ ರಾಯಭಾರ ಕಚೇರಿ ಜತೆ ಚರ್ಚೆ ಮಾಡುತ್ತೇನೆ. ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತೇವೆ. ಯುದ್ಧ ನಡೆಯುತ್ತಿರುವ ಹಿನ್ನೆಲೆ ಮೃತದೇಹ ತರುವುದು ಸ್ವಲ್ಪ ಕಷ್ಟವಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕನ್ನಡಿಗ ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ.ಯುದ್ಧ ನೆಲೆಯಿಂದ ಕನ್ನಡಿಗರನ್ನು ಕರೆತರುತ್ತೇವೆ. ನವೀನ್ ಜತೆಗಿದ್ದ ಸ್ನೇಹಿತರ ಮಾಹಿತಿ ಕಲೆಹಾಕುತ್ತಿದ್ದೇವೆ. ಯುದ್ಧದ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾತನಾಡುತ್ತದೆ. ಕಾಂಗ್ರೆಸ್ ಎಷ್ಟು ತಳ ಮಟ್ಟಕ್ಕೆ ಹೋಗಿದೆ ಅನ್ನೋದು ಗೊತ್ತಾಗುತ್ತದೆ. ಈ ಹಿಂದೆ ಯುದ್ಧ ನಡೆದಾಗ ಒಬ್ಬರನ್ನು ಕರೆತರಲಿಲ್ಲ. ಈಗ ರಾಜಕಾರಣ ಮತನಾಡುತ್ತಿದ್ದಾರೆ ಎಂದರು.