ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆ ಶಾಕ್ ನೀಡಿದೆ. ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರ ಹಾಗೂ ದಿನ ಬಳಕೆ ಉತ್ಪನ್ನಗಳ ಬೆಲೆ ಏರಿಕೆ ನಂತರ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದೆ. ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ಇಂದು (ಮಾ.20) ಆದೇಶ ಹೊರಡಿಸಿದೆ. ಈ ದರವ ಏ.1 ರಿಂದ ಜಾರಿಗೆ ಬರಲಿದೆ.
ಮಾ.22ರಿಂದ ಎರಡ್ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ ದರ ಜಾರಿಗೆ ಬರಲಿದೆ.