ಬೆಂಗಳೂರು: ಸತ್ತು ಹೋದ ರೈತರ ಜಮೀನಿನ ಮಾಲೀಕತ್ವ ಬದಲಾವಣೆ ಜಟಿಲ ಸಮಸ್ಯೆಗಳಲ್ಲೊಂದು. ಕೆಲ ರೈತರು, ತಾವು ಜೀವಂತ ಇರುವಾಗಲೇ ಮಕ್ಕಳು ಜಗಳ ಮಾಡಬಾರದೆಂದು ಪಾಲು ವಿಭಾಗ ಮಾಡಿ, ಮಕ್ಕಳಿಗೆ ಜಮೀನು ಹಂಚಿ ಖಾತೆ ಮಾಡಿಸಿರುತ್ತಾರೆ. ಇನ್ನೂ ಕೆಲವು ರೈತರು ತಮ್ಮ ಹೆಸರಲ್ಲಿ ಜಮೀನು ಇರುವಾಡಗಲೇ ಸತ್ತು ಹೋಗಿರುತ್ತಾರೆ. ತಂದೆ ಸತ್ತ ನಂತರ ಮಕ್ಕಳು ಆಸ್ತಿ ಹಂಚಿಕೆ ಮತ್ತು ಪೌತಿ ಖಾತೆ ಮಾಡಿಸಲು ರೈತರು ಕಂದಾಯ ಇಲಾಖೆಗೆ ಓಡಾಡಿ ಸಾಕು ಸಾಕಾಗಿ ಹೋಗಿರುತ್ತಾರೆ. ಸಕಾಲಕ್ಕೆ ಸರಿಯಾಗಿ ರೈತರಿಗೆ ಖಾತೆ ಬದಲಾವಣೆ ಆಗದೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಇಂತಹ ಸಮಸ್ಯೆ ಇರುವ 48 ಲಕ್ಷ ಪಹಣಿಗಳು ರಾಜ್ಯದಲ್ಲಿವೆ.
ದಾವಣಗೆರೆ: ಏಷ್ಯಾದ ಎರಡನೇ ದೊಡ್ಡ ಕೆರೆ ಸೊಳೆಕೆರೆ ಭರ್ತಿಗೆ ಕ್ಷಣಗಣನೆ…!!!
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಮಂಡ್ಯ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ 48 ಲಕ್ಷ ಪಹಣಿಗಳು ಸತ್ತ ರೈತರ ಹೆಸರಿನಲ್ಲಿವೆ. ಕಂದಾಯ ದಾಖಲೆಗಳ ನಿರ್ವಹಣೆ ಈ ರೀತಿನಾ ಮಾಡದು..? ಪೌತಿ ಖಾತೆಯನ್ನು ಮಾಡಲು ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದೀರಿ? ಈ 48 ಲಕ್ಷ ಜಮೀನುಗಳಿಗೆ ವಾರಸುದಾರರು ಯಾರು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ಜೇನುಗಾರಿಕೆ 30 ದಿನದ ತರಬೇತಿಗೆ ಅರ್ಜಿ ಆಹ್ವಾನ
ಸತ್ತವರನ್ನು ಜಮೀನಿನ ಮಾಲೀಕರೆಂದು ಪರಿಗಣಿಸಲು ಸಾಧ್ಯವೇ? ಕಂದಾಯ ನಿರೀಕ್ಷಕರು, ಶಿರಸ್ತೇದಾರ್, ತಹಶೀಲ್ದಾರ್ ಈ ಮೂವರು ಸ್ಥಳ ಮಹಜರು ನಡೆಸಿ, ವಂಶವೃಕ್ಷ ಆಧರಿಸಿ ಪೌತಿ ಖಾತೆ ಮಾಡಿಕೊಡಿ. ಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿ ಬರಲಿ. ವಿವಾದವಿದ್ದರೆ ಜಂಟಿ ಖಾತೆಯನ್ನಾದರೂ ಮಾಡಿಕೊಡಿ. ಆಗ ಜಮೀನಿಗೆ ವಾರಸುದಾರರು ಯಾರು ಎಂಬುದು ಲೆಕ್ಕ ಸಿಗುತ್ತದೆ ಎಂದರು.