ಬೆಂಗಳೂರು; ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ವರುಣ ದೇವ ಕಣ್ತೆರೆದಿದ್ದಾನೆ. ಮುಂಗಾರು ಮಳೆ ಪ್ರವೇಶಕ್ಕೂ ಮುನ್ನವೇ ರಾಜ್ಯದ ಹಲವು ಜಿಲ್ಲೆಯಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗುತ್ತಿದೆ. ಬಿಲಿನ ತಾಪಮಾನ ಇಳಿಕೆಯಾಗಿದ್ದು, ವಾತಾವರಣ ಸ್ವಲ್ಪ ತಂಪಾಗಿದೆ. ಈ ಮಳೆ ಏಪ್ರಿಲ್ 18ರವರೆಗೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಾವಣಗೆಗೆರೆ ಜಿಲ್ಲೆಯ ದಾವಣಗೆರೆ ಸುತ್ತಮುತ್ತ, ಚನ್ನಗಿರಿ, ಸಂತೇಬೆನ್ನೂರು, ಮಲೇಬೆನ್ನೂರು, ಹೊನ್ನಾಳಿ ಹಾಗೂ ಮಾಯಕೊಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆ ಮಳೆಯಾಗಿತ್ತು. ಇಂದು (ಏ.13) ಸಹ ದಾವಣಗೆರೆ ಜಿಲ್ಲೆಯ ಕೆಲ ಭಾಗದಲ್ಲಿ ಜೋರು ಗಾಳಿ, ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.
ಮಳೆ ಮುನ್ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ.
ಶುಕ್ರವಾರ ಬೆಳಗಾವಿ 50 ಮಿ.ಮೀ, ವಿಜಯಪುರ 45 ಮಿ.ಮೀ, ಬೀದರ್ 45 ಮಿ.ಮೀ, ಚಿಕ್ಕಮಗಳೂರು 44 ಮಿ.ಮೀ, ಉತ್ತರ ಕನ್ನಡ 43 ಮಿ.ಮೀ, ಗದಗ 43 ಮಿ.ಮೀ, ಯಾದಗಿರಿ 39 ಮಿ.ಮೀ, ಕೊಪ್ಪಳ 37 ಮಿ.ಮೀ, ದಾವಣಗೆರೆ 36 ಮಿ.ಮೀ, ಕಲಬುರಗಿ 31 ಮಿ.ಮೀ, ಧಾರವಾಡ 31 ಮಿ.ಮೀ, ಶಿವಮೊಗ್ಗ 24 ಮಿ.ಮೀ, ಮೈಸೂರು 20 ಮಿ.ಮೀ, ಮತ್ತು ಕೊಡಗು ಜಿಲ್ಲೆಯಲ್ಲಿ 17 ಮಿ.ಮೀ ಮಳೆಯಾಗಿದೆ.