ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯಲ್ಲಿಗುಡುಗು- ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಮೂವರು ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಹೊರವಲಯದಲ್ಲಿ ಬೀರಪ್ಪ ನಿಂಗಪ್ಪ ಅವರಾದಿ (15), ಮಸಳಿ ಬಿ.ಕೆ.ಗ್ರಾಮದ ಸೋಮಶೇಖರ ಪಟ್ಟಣಶೆಟ್ಟಿ (45) ಮತ್ತು ಚಡಚಣ ತಾಲ್ಲೂಕಿನ ಹಾವನಾಳ ಗ್ರಾಮ ಸುನಂದಾ ಶ್ರೀಮಂತ ಡೋಳ್ಳಿ (50) ಎಂಬುವರು ಮೃತಪಟ್ಟಿದ್ದಾರೆ. ಒಂದು ಎಮ್ಮೆ ಮತ್ತು ಎರಡು ಹಸು ಸಿಡಲಿಗೆ ಹೊಡೆತಕ್ಕೆ ಮೃತಪಟ್ಟಿವೆ.
ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ, ಬೀದರ್, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ. ವಿಜಯಪುರ ಜಿಲ್ಲೆ ತಿಕೋಟಾ,ಆಲಮಟ್ಟಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. ತಾಳಿಕೋಟೆ ಪಟ್ಟಣದಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ.



