ದಾವಣಗೆರೆ: ಜಿಲ್ಲೆಯಲ್ಲಿ 2025-26ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(Pradhan Mantri Fasal Bima Yojana) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ದಾವಣಗೆರೆ; ಅಡಿಕೆ ದರ ಸ್ಥಿರ; ಡಿ.1ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಯಾವ ಬೆಳೆಗೆ ವಿಮೆ ಸೌಲಭ್ಯ..?
ಈ ಯೋಜನೆಯಡಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ ಅಥವಾ ಹೋಬಳಿ ಮಟ್ಟದಲ್ಲಿ ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯ ಕಾಂತಿ (ನೀರಾವರಿ), ಮೆಕ್ಕೆಜೋಳ (ನೀರಾವರಿ), ರಾಗಿ (ನೀರಾವರಿ), ಹುರುಳಿ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ನೀರಾವರಿ) ಕೃಷಿ ಬೆಳೆಗಳಿಗೆ ಹಾಗೂ ತೋಟಗಾರಿಕೆ ಬೆಳೆಗಳಾದ ಈರುಳ್ಳಿ (ನೀರಾ ವರಿ), ಟೊಮಾಟೋ ಬೆಳೆಗಳಿಗೆ ಅಧಿಸೂಚನೆ ಮಾಡಲಾಗಿದೆ.
ಮುಂದಿನ ಐದು ದಿನ ರಾಜ್ಯದ ಕೆಲ ಭಾಗದಲ್ಲಿ ಮಳೆ ಮುನ್ಸೂಚನೆ
ಯಾವ ರೈತರು ಅರ್ಹರು
ದಿ ಓರಿಯಂಟಲ್ ಇನ್ಶ್ಯೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯನ್ನು ಬೆಳೆ ವಿಮೆಗೆ ನಿಗದಿಪಡಿಸಲಾಗಿದೆ. ಬೆಳೆ ಸಾಲ ಪಡೆದ ರೈತರಿಗಾಗಿ ಆಪ್ಟಿಂಗ್-ಔಟ್ ಮತ್ತು ಆಪ್ಟಿಂಗ್-ಇನ್ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆ ಮಾಡಿಸುವುದು ಕಡ್ಡಾಯವಲ್ಲ. ಬೆಳೆ ವಿಮೆ ಮಾಡಲು ಇಚ್ಛಿಸದ ಸಾಲಗಾರ ರೈತರು ನಿಗದಿಪಡಿಸಿದ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮೊದಲು ಸಂಬಂಧಿಸಿದ ಬ್ಯಾಂಕಿಗೆ ಆಪ್ಟಿಂಗ್-ಔಟ್ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಂತಹ ಅರ್ಜಿ ಸಲ್ಲಿಸಿದ ರೈತರನ್ನು ಬ್ಯಾಂಕ್ ವಿಮಾ ಯೋಜನೆಯಿಂದ ಹೊರಗಿಡಬೇಕು. ಆಪ್ಟಿಂಗ್-ಔಟ್ ನಮೂನೆ ಸಲ್ಲಿಸದ ಉಳಿದ ಎಲ್ಲ ಸಾಲಗಾರ ರೈತರನ್ನು ವಿಮಾ ಯೋಜನೆಯಡಿ ಒಳಪಡಿಸುವುದು ಕಡ್ಡಾಯ.
ನೋಂದಣಿಗೆ ಎಫ್ ಐಡಿ ಕಡ್ಡಾಯ
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್ ಸಂಖ್ಯೆ ಜೋಡಿತ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿಯನ್ನು ಸಂಬಂಧಿಸಿದ ಬ್ಯಾಂಕ್ ಅಥವಾ ಸಿ.ಎಸ್.ಸಿ. ಕೇಂದ್ರಗಳಲ್ಲಿ ಒದಗಿಸಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಕಡ್ಡಾಯವಾಗಿ ಎಫ್.ಐ.ಡಿ. ಹೊಂದಿರಬೇಕು.
ಹೆಚ್ವಿನ ಮಾಹಿತಿ ಇಲ್ಲಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಹಕಾರಿ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.



