ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾದಿಂದ ವಿದ್ಯುತ್ ದರ ಹೆಚ್ಚಳಕ್ಕೆ ತಡೆ ನೀಡಿದ್ದ ಸರ್ಕಾರ, ಇದೀಗ ವಿದ್ಯುತ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಜನರಿಗೆ ಪವರ್ ಶಾಕ್ ನೀಡಿದೆ.
ಪ್ರತಿ ಯೂನಿಟ್ ಗೆ 40 ಪೈಸೆ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿದೆ. ಕೆಇಆರ್ ಸಿ ಮೂಲಕ ದರ ಹೆಚ್ಚಳ ಆದೇಶ ಹೊರಡಿಸಿದೆ. ನವೆಂಬರ್ 01 ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆಗೊಂಡಿದೆ. ಈ ಮೂಲಕ ಕೊರೊನಾ ಸಂಕಷ್ಟದ ಮಧ್ಯೆ ಸರ್ಕಾರ ಜನರಿಗೆ ಮತ್ತೊಂದು ಸಂಕಷ್ಟ ನೀಡಿದೆ. ಮಾರ್ಚ್ ತಿಂಗಳಲ್ಲಿ ಏರಿಕೆಯಾಗಬೇಕಿದ್ದ ದರ, ಕೊರೊನಾ ಸಂಕಷ್ಟದಿಂದ ತಡೆಹಿಡಿಯಲಾಗಿತ್ತು. ಇದೀಗ ದರ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.



