ಬೆಳಗಾವಿ: ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸಿಮ್ಮರು, ಸಮಯಕ್ಕೆ ತಕ್ಕಂತೆ ಅವರು ಸುಳ್ಳು ಹೇಳುತ್ತಾರೆ, ಕಣ್ಣೀರು ಹಾಕುವುದು ದೇವೇಗೌಡ ಮನೆಯವರ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಒಲೈಕೆಗೂ ಮತ್ತು ಇನ್ಯಾರನ್ನೋ ನಂಬಿಸಲು ಕಣ್ಣೀರು ಹಾಕುತ್ತಾರೆ. ಅವರಿಗೆ ಗುಡ್ ವಿಲ್ ಇದ್ದರೆ ಅಲ್ವಾ ಹಾಳಾಗೋದು, ಗುಡ್ ವಿಲ್ ಇಲ್ಲ ಎಂದರೆ ಹಾಳಾಗುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು, ಇವರು ವೆಸ್ಟರ್ನ್ ಹೊಟೆಲ್ ನಿಂದ ಆಡಳಿತ ನಡೆಸಿದ್ದರು. ಇವರ ಕೇಂದ್ರ ಸ್ಥಾನ ಹೊಟೇಲ್ ಆಗಿತ್ತು. ಕಾಂಗ್ರೆಸ್ ಶಾಸಕರಿಗೆ ಅನುದಾನ, ಕುಮಾರಸ್ವಾಮಿ ಮನೆಯಿಂದ ಹಣ ತಂದು ಕೊಟ್ಟಿದ್ದಾರಾ, ನಮ್ಮ ಶಾಸಕರು ಬೆಂಬಲ ಕೊಟ್ಟಿದ್ದಕ್ಕೆ ಅವರು ಸಿಎಂ ಆಗಿದ್ದಾರೆ ತಿರುಗೇಟು ನೀಡಿದರು.



