ಹೊನ್ನಾಳಿ: ಎರಡು ವರ್ಷ ಪೂರೈಸಿದ ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷ ಸಚಿವರಾಗಿ ಕೆಲಸ ಮಾಡಿದವರನ್ನು ಕೈ ಬಿಡಲಿ. ನಮಗೂ ಸಚಿವರಾಗಬೇಕು ಎಂದು ಆಸೆ ಇರುತ್ತೆ. ಹೀಗಾಗಿ ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಿ ಉಳಿದವರಿಗೆ ನೀಡಲಿ ಎಂದರು.
ಪ್ರಾದೇಶಿಕ ಅಸಮತೋಲನವಾಗಿದೆ.ಅದನ್ನು ಸರಿಪಡಿಸಿ ಎಂದು ಕೇಳುತ್ತಿದ್ದೇವೆ. ಹಾದೀಲಿ ಬೀದೀಲಿ ಕೇಳ್ತಾ ಇಲ್ಲ. ನಾವು ಪಕ್ಷದ ಚೌಕಟ್ಟಿನಲ್ಲಿ ಕೇಳುತ್ತಿದ್ದೇವೆ ಎಂದು ತಿಳಿಸಿದರು.



