ಮೈಸೂರು : ಸದಾ ಬೆನ್ನಿಗೆ ಚೂರಿ ಇರೀತಿದ್ದವರಿಗೆ ಈಗ ನೋವು ಗೊತ್ತಾಗಿದೆ. ಬೇರೆಯವರ ಬೆನ್ನಿಗೆ ಚೂರಿ ಇರಿದು ಸಂತೋಷಿಯಾಗಿದ್ದವನಿಗೆ ಈಗ ನೋವಾಗ್ತಾ ಇದೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಬಿಜೆಪಿ, ಜೆಡಿಎಸ್ ವಿರೋಧ ಪಕ್ಷಗಳು ನಿಮ್ಮನ್ನು ಸೋಲಿಸಿದ್ರಾ ..? ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತಾ? ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದಾಗ ಅದು ಗೊತ್ತಾಗಲಿಲ್ವಾ? ಡಾ.ಜಿ.ಪರಮೇಶ್ವರ್‌ರನ್ನು ಸೋಲಿಸಿದವರು ಯಾರೆಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಿದ್ದರಾಮಯ್ಯ ತನ್ನ ಕೋಳಿ ಕೂಗಿದ್ರೆ ಬೆಳಕಾಗೋದು ಅಂದುಕೊಂಡಿದ್ದಾರೆ. ಆದರೆ, ಅವರ ಕೋಳಿ ಕೂಗದೇ ಇದ್ದರೂ ಬೆಳಕಾಗುತ್ತದೆ. ಅನೇಕ ವಿಚಾರದಲ್ಲಿ ಕಾನೂನು ಮಾತನಾಡುವ ಅವರು, ಜಾರ್ಜ್ ಹೆಸರಿನಲ್ಲಿ ಮನೆ ತಗೊಂಡು ಇದ್ದಾರಲ್ಲಾ ಇವರೆಂಥ ಆಸೆಬುರುಕರು ಎಂಬುದಾಗಿ ಸಿಎಂ ಅಧಿಕೃತ ನಿವಾಸ ಕೃಷ್ಣಾ ಖಾಲಿ ಮಾಡದ್ದರ ಬಗ್ಗೆ ಸಿದ್ದರಾಮಯ್ಯಗೆ ಇರೋವಷ್ಟು ಹೊಟ್ಟೆಕಿಚ್ಚು ಜಗತ್ತಿನಲ್ಲೇ ಯಾರಿಗೂ ಇಲ್ಲ ಎಂದು ಹೇಳಿದರು.



