ಬೆಂಗಳೂರು: ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಹಾಗೂ ಕಲ್ಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಹುಬ್ಬಳ್ಳಿ–ಧಾರವಾಡ, ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಸ್ಪಷ್ಟವಾಗಿದೆ. ಇನ್ನು ಕಲಬುರ್ಗಿಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕಂಡಿದೆ.
ಹುಬ್ಬಳ್ಳಿ–ಧಾರವಾಡ, ಬೆಳಗಾವಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಹಂತಕ್ಕೆ ತಲುಪಿದೆ.ಕಲಬುರ್ಗಿಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದ್ದರೂ, ಬಿಜೆಪಿ ತೀವ್ರ ಪೈಪೋಟಿ ನೀಡಿದೆ.
- ಹುಬ್ಬಳ್ಳಿ –ಧಾರವಾಡ ( ವಾರ್ಡ್ಗಳು– 82): ಬಿಜೆಪಿ–27, ಕಾಂಗ್ರೆಸ್–14, ಜೆಡಿಎಸ್–00, ಇತರರು–03
- ಬೆಳಗಾವಿ ( ವಾರ್ಡ್ಗಳು–58): ಬಿಜೆಪಿ–31, ಕಾಂಗ್ರೆಸ್–09, ಜೆಡಿಎಸ್–00,ಇತರರು–13
- ಕಲಬುರ್ಗಿ (ವಾರ್ಡ್ಗಳು–55): ಬಿಜೆಪಿ–08, ಕಾಂಗ್ರೆಸ್–13, ಜೆಡಿಎಸ್–02, ಇತರರು–01



