ತುಮಕೂರು: ಸಿಎಂ ಯಡಿಯೂರಪ್ಪರ ಸ್ಥಾನದಲ್ಲಿ ನಾನು ಏನಾದ್ರೂ ಇದ್ದಿದರೆ ನನ್ನ ರಕ್ತ ಹೀರಿ, ಚರ್ಮ ಸುಲಿಯೋರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾಗರರೊಂದಿಗೆ ಮಾತನಾಡಿ, ನಾನು ಪ್ರವಾಹ ಮತ್ತು ಕೊರೊನಾ ವೇಳೆ ಸಿಎಂ ಆಗಿದ್ರೆ, ನನ್ನ ರಕ್ತ ಹೀರೋರು, ಚರ್ಮ ಸುಲಿಯೋರು. ಇನ್ನು ನಾನು ಯಾವುದೇ ಒಳ್ಳೆ ಕೆಲಸ ಮಾಡಿದ್ರೂ ಯಾರೂ ನನ್ನ ಪರ ನಿಂತಿಲ್ಲ.
ಈಗ ಅವರು ಏನು ಕೆಟ್ಟ ಕೆಲಸ, ಹಗಲು ದರೋಡೆ ಮಾಡಿದ್ರೂ ಇದೇ ಸರ್ಕಾರ ಸರಿ ಎಂದು ಸರ್ಟಿಫಿಕೇಟ್ ನೀಡ್ತಿದ್ದಾರೆ. ನಾನು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಪ್ರವಾಹ ಬಂತು. ಮಹಾಮಾರಿ ಕೊರೊನಾ ಬಂತು. ಇವೆಲ್ಲವನ್ನೂ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ರೂ ಸರ್ಕಾರ ಒಳ್ಳೆ ಕೆಲಸ ಎಂಬ ಸರ್ಟಿಫಿಕೇಟ್ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.



