ಬೆಂಗಳೂರು: ಅಕ್ರಮವಾಗಿ ಕಟ್ಟಿದ ನಿವೇಶನ ಮತ್ತು ಮನೆಗಳಿಗೆ ಶಾಶ್ವತ ದಾಖಲೆ ಪತ್ರ ನೀಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕಾನೂನು ತೊಡಕುಗಳಿಂದ ದಾಖಲಾತಿ ಸಮಸ್ಯೆ ಎದುರಿಸುತ್ತಿರುವವರಿಗೆ ಶಾಶ್ವತ ದಾಖಲೆ ನೀಡಲಾಗುವುದು. ನಿವೇಶನ ಮತ್ತು ಮನೆ ಮಾಲೀಕರಿಗೆ ಎದುರಾದ ಸಮಸ್ಯೆ ಸರಿಪಡಿಸಲು ಸಚಿವರಿಗೆ ತಿಳಿಸಲಾಗಿದ್ದು, ದೆಹಲಿಯಲ್ಲಿ ಕೂಡ ಮಾತನಾಡಿದ್ದೇನೆ.ಮನೆ ಇದ್ದು ಹಕ್ಕುಪತ್ರ ಇಲ್ಲದವರಿಗೆ ಹಕ್ಕುಪತ್ರಗಳನ್ನು ಕೊಡುತ್ತೇವೆ ಎಂದರು.



