ಬೆಂಗಳೂರು: ಸಂಪುಟ ವಿಸ್ತರಣೆಯಾಗಿ ಒಂದು ವಾರದ ಬಳಿಕೆ ಸಿಎಂ ಯಡಿಯೂರಪ್ಪ ನೂತನ 7 ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಿದ್ದು, ಖಾತೆ ಹಂಚಿಕೆ ಪಟ್ಟಿಯನ್ನು ಸಿಎಂ ರಾಜಭವನಕ್ಕೆ ಕಳುಹಿಸಿದ್ದಾರೆ. ಕೆಲ ಸಚಿವರ ಖಾತೆಯನ್ನು ಕೂಡ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
- ನೂತನ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.
- ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ
- ಮುರುಗೇಶ್ ನಿರಾಣಿ-ಗಣಿ ಮತ್ತು ಭೂ ವಿಜ್ನಾನ
- ಎಂಟಿಬಿ ನಾಗರಾಜ್-ಅಬಕಾರಿ ಇಲಾಖೆ
- ಸಿ.ಪಿ.ಯೋಗೇಶ್ವರ್-ಸಣ್ಣ ನೀರಾವರಿ ಖಾತೆ
- ಎಸ್.ಅಂಗಾರ- ಮೀನುಗಾರಿಕೆ ಮತ್ತು ಬಂದರು
- ಸಿಸಿ ಪಾಟೀಲ್- ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ
- ಅರವಿಂದ ಲಿಂಬಾವಳಿ-ಅರಣ್ಯ ಇಲಾಖೆ
ಇನ್ನು ಕೆಲ ಪ್ರಮುಖ ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಜೆ.ಸಿ. ಮಾಧುಸ್ವಾಮಿ ಬಳಿಯಿದ್ದ ಕಾನೂನು ಮತ್ತು ಸಂಸದೀಯ ಖಾತೆಯನ್ನು ಹೆಚ್ಚುವರಿಯಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ. ಡಾ.ಕೆ.ಸುಧಾಕರ್ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಜೆ.ಸಿ. ಮಾಧುಸ್ವಾಮಿ ಅವರಿಗೆ ವಹಿಸಲಾಗಿದೆ. ಆನಂದ್ ಸಿಂಗ್ ಬಳಿಯಿದ್ದ ಅರಣ್ಯ ಇಲಾಖೆಯನ್ನು ಅರವಿಂದ ಲಿಂಬಾವಳಿಗೆ ನೀಡಲಾಗಿದ್ದು, ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದೆ.
ಆರ್.ಶಂಕರ್ ಗೆ ಪೌರಾಡಳಿತ, ಗೋಪಾಲಯ್ಯ ಅವರಿಗೆ ತೋಟಗಾರಿಕೆ ಮತ್ತು ಸಕ್ಕರೆ ಹಾಗೂ ನಾರಾಯಣ ಗೌಡ ಯುವಜನ ಕ್ರೀಡೆ, ಹಜ್ ಮತ್ತು ವಕ್ಫ್ ಖಾತೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.