ದಾವಣಗೆರೆ: ಜಾಬ್ ಕಾರ್ಟ್ ಸಹಯೋಗದಲ್ಲಿ ಕೆಎಸ್‍ಒಯು ವಿಶ್ವವಿದ್ಯಾಲಯದ ವತಿಯಿಂದ ಮಾ. 15 ರಿಂದ 23 ರವರೆಗೆ 8 ದಿನಗಳ ಕಾಲ ವರ್ಚುವಲ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಯೋಗ ಮೇಳದ ಉದ್ದೇಶ ವಿವಿಧ ವಿವಿಗಳಿಂದ ಅವಕಾಶ ವಂಚಿತರಿಗೆ, ಮಹಿಳೆಯರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಪದವಿ ನೀಡುವುದರ ಜೊತೆಗೆ ಉದ್ಯೋಗವನ್ನು ನೀಡುವುದಾಗಿದ್ದು, ರಾಜ್ಯಾದ್ಯಾಂತ ಇರುವ ವಿವಿಧ ಹೆಸರಾಂತ ಸುಮಾರು 100 ಕ್ಕಿಂತ ಹೆಚ್ಚು ಕಂಪನಿಗಳ ಜೊತೆ ಕೆಎಸ್‍ಒಯು ಜಾಬ್‍ಕಾರ್ಟ್ (ಉದ್ಯೋಗ ಮೇಳ)ನ್ನು ಆಯೋಜಿಸಲಾಗಿದೆ.
ಕರಾಮುವಿಯಲ್ಲಿ ಹಾಗೂ ವಿವಿಧ ವಿಶ್ವವಿದ್ಯಾನಿಲಯದಿಂದ ಪದವಿ (ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಐ.ಟಿ.ಐ, ಡಿಪ್ಲೋಮ, ಬಿ.ಇ ಯಾವುದೇ ಪದವಿ ಹಾಗೂ ಸ್ನಾತಕೋತ್ತರ) (ವಿಶೇಷವಾಗಿ 2018ರ ನಂತರ ಪದವಿ ಪಡೆದವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ) ಪಡೆದಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಸುಮಾರು 6700 ಕ್ಕಿಂತ ಹೆಚ್ಚು ಉದ್ಯೋಗಾರ್ಥಿಗಳು ಕೆಎಸ್‍ಒಯು ಜಾಬ್‍ಕಾರ್ಟ್ (ಉದ್ಯೋಗ ಮೇಳ)ದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9513 37 37 37 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



