ಬೆಂಗಳೂರು : ಕೊರೊನಾ ಹೆಚ್ಚಳ ಹಿನ್ನೆಲೆ ಸರ್ಕಾರ ಇಂದಿನಿಂದ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಸರ್ಕಾರ ನೈಟ್ ಕರ್ಪ್ಯೂ ಘೋಷಿಸಿದೆ. ಆದರೆ, ಕೆಎಸ್ ಆರ್ ಟಿಸಿ ಸೇವೆಯಲ್ಲಿ ಮಾತ್ರ ಯಾವುದೇ ವ್ಯತ್ಯವಿಲ್ಲ. ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸಲಿದೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.
ಈ ಬಗ್ಗೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ವಾರಂತ್ಯದ ನೈಟ್ ಕರ್ಫ್ಯೂ ವೇಳೆ ಬಸ್ ಗಳು ಕಾರ್ಯಾ ಚರಣೆ ನಡೆಸಲಿವೆ. ಪ್ರಯಾಣಿಕರ ಅನುಗುಣವಾಗಿ ಸಂಚರಿಸಲಿವೆ. ಈ ವೇಳೆ ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.