Connect with us

Dvgsuddi Kannada | online news portal | Kannada news online

ದಾವಣಗೆರೆ ಸಹಿತ ರಾಜ್ಯದ 16 ನಗರದಲ್ಲಿ ಖಾಸಗಿ ಎಫ್ ಎಂ ಕೇಂದ್ರ ತೆರೆಯಲು ಕೇಂದ್ರ ಸಂಪುಟ ಒಪ್ಪಿಗೆ

ಪ್ರಮುಖ ಸುದ್ದಿ

ದಾವಣಗೆರೆ ಸಹಿತ ರಾಜ್ಯದ 16 ನಗರದಲ್ಲಿ ಖಾಸಗಿ ಎಫ್ ಎಂ ಕೇಂದ್ರ ತೆರೆಯಲು ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ದಾವಣಗೆರೆ ಸಹಿತ ರಾಜ್ಯದ 16 ನಗರದಲ್ಲಿ ಖಾಸಗಿ ಎಫ್ ಎಂ ಕೇಂದ್ರ ತೆರೆಯಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಖಾಸಗಿ ಎಫ್‌ಎಂ ರೇಡಿಯೋ 3ನೇ ಹಂತ ನೀತಿಯಡಿ 784 ಕೋಟಿ ರೂ. ಮೀಸಲು ಬೆಲೆಯೊಂದಿಗೆ, ಕರ್ನಾಟಕದ 16 ನಗರ ಮತ್ತು ದೇಶದ ಒಟ್ಟು 234 ನಗರಗಳಲ್ಲಿ 730 ಎಫ್ ಎಂ ಚಾನೆಲ್‌ಗ‌ಳನ್ನು ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದ ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ ತಲಾ 4, ಬಾಗಲಕೋಟೆ, ಬೀದರ್‌, ಚಿಕ್ಕ ಮಗಳೂರು, ಚಿತ್ರದುರ್ಗ, ಗದಗ -ಬೆಟಗೇರಿ, ಹೊಸ ಪೇಟೆ, ಹಾಸನ, ಕೋಲಾರ, ರಾಯ ಚೂರು, ತುಮಕೂರು ಮತ್ತು ಉಡುಪಿ ತಲಾ 3 ಕೇಂದ್ರ ತೆರೆಯಲಿದೆ.ಇದಕ್ಕೆ ಸಂಬಂಧಿಸಿದಂತೆ ಇ-ಹರಾಜು ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

ಎಫ್‌ಎಂ ಚಾನೆಲ್‌ಗ‌ಳಿಂದ ವಾರ್ಷಿಕ ಪರವಾನಿಗೆ ಶುಲ್ಕ ಸಂಗ್ರಹಿಸುವ ಪ್ರಸ್ತಾವಕ್ಕೂ ಒಪ್ಪಿಗೆ ದೊರೆತಿದೆ. ಜಿಎಸ್‌ಟಿ ಹೊರತುಪಡಿಸಿ ಆದಾಯದ ಶೇ. 4ರಷ್ಟು ಶುಲ್ಕತೆರಬೇಕಾಗುತ್ತದೆ. ಖಾಸಗಿ ಎಫ್‌ಎಂಗಳಿಂದ ದೂರವಿದ್ದ ಈ ನಗರಗಳಲ್ಲಿ, ಇನ್ನು ಸ್ಥಳೀಯ ವಿಷಯವಸ್ತುಗಳನ್ನು ಸ್ಥಳೀಯ ಭಾಷೆಯಲ್ಲಿ ನೀಡಲು ಸಾಧ್ಯವಾಗಲಿದೆ. ಇವುಗಳಿಂದ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಸ್ಥಳೀಯ ಭಾಷೆ, ಸಂಸ್ಕೃತಿ ಉತ್ತೇಜನಕ್ಕೂ ಸಹಕಾರಿಯಾಗಲಿದೆ. ಸರಕಾರ ಜನರನ್ನು ತಲುಪಲು ಸುಲಭವಾಗಲಿದೆ ಎಂದು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top