ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ಜೂ.26ರಿಂದ ನಂದಿನಿ ಹಾಲಿನ ದರ ಏರಿಕೆ ಮಾಡಿರುವುದಾಗಿ ಪ್ರಕಟಿಸಿದೆ. ನಂದಿನಿ ವಿವಿಧ ಪ್ಯಾಕ್ ನ ಹಾಲಿನ ದರಗಳು ನಾಳೆಯಿಂದ (ಜೂ.26) ಹೆಚ್ಚಳವಾಗಲಿದೆ.
ಈ ಬಗ್ಗೆ ಕೆಎಂಎಫ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈಗ ಸುಗ್ಗಿ ಕಾಲವಾಗಿರುವುದರಿಂದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರತಿ ದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯೂ ಒಂದು ಕೋಟಿ ಲೀಟರ್‌ಗಳ ಹತ್ತಿರ ತಲುಪಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೇಟ್‌ಗಳಿಗೆ ಮಾತ್ರ 50 ಮಿಲಿ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೇಟ್‌ಗಳ ದರವನ್ನು 2ರೂ. ಹೆಚ್ಚಳ ಮಾಡಲಾಗಿದೆ.
ಹೊಸ ದರವು ದಿನಾಂಕ:26.06.2024 ರಿಂದ ಅನ್ವಯವಾಗುತ್ತದೆ. ಈ ಆದೇಶವು ಮುಂದಿನ ಆದೇಶದ ವರೆಗೂ ಚಾಲ್ತಿಯಲ್ಲಿರುತ್ತದೆ. ಒಕ್ಕೂಟಗಳಲ್ಲಿ ಹಳೆಯ ಪರಿಮಾಣ/ದರ ಮುದ್ರಿತವಾಗಿರುವ ಹಾಲಿನ ಪ್ಯಾಕೇಟುಗಳ ದಾಸ್ತಾನಿದ್ದು, ದಾಸ್ತಾನು ಮುಗಿಯುವವರೆಗೂ ಹಳೆಯ ಮುದ್ರಿತ ಪರಿಮಾಣ ಪ್ಯಾಕೇಟುಗಳಲ್ಲಿ ಹಾಲು ಸರಬರಾಜಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಿದೆ.
- ಪರಿಷ್ಕೃತ ದರ
- ಟೋನ್ಡ್ ಹಾಲು- 500 ಎಂಎಲ್ ಗೆ ರೂ.22 ಇದ್ದದ್ದು, 5050ಎಂಎಲ್ ಗೆ 24 ರೂ ಆಗಲಿದೆ 1 ಲೀಟರ್ ಬೆಲೆ ರೂ.42ರಿಂದ 44ಕ್ಕೆ ಏರಿಕೆಯಾಗಲಿದೆ
- ಹೋಮೋಜಿನೈಸ್ಡ್ ಟೋನ್ಡ್ ಹಾಲು ಅರ್ಧ ಲೀಟರ್ ರೂ.22ರಿಂದ 24ಕ್ಕೆ ಏರಿಕೆ, ಒಂದು ಲೀಟರ್ ಹಾಲಿನ ದರ ರೂ.43ರಿಂದ 45
- ಹೋಮೋಜಿನೈಸ್ಡ್ ಹಸುವಿನ ಹಾಲು ಅರ್ಧ ಲೀಟರ್ ರೂ.24ರಿಂದ 26 ರೂ, 1 ಲೀಟರ್ ಹಾಲಿನ ಬೆಲೆ ರೂ.46ರಿಂದ 48
- ಸ್ಪೆಷಲ್ ಅರ್ಧ ಲೀಟರ್ ಹಾಲು ರೂ.25ರಿಂದ 27, 1 ಲೀಟಲ್ ರೂ.48 ರಿಂದ 50
- ಶುಭಂ ಹಾಲು ಅರ್ಧ ಲೀಟರ್ ಗೆ ರೂ.25 ಇದ್ದದ್ದು 27 ಆಗಲಿದೆ. 1 ಲೀಟರ್ ಬೆಲೆ ರೂ.48 ರಿಂದ 50
- ಸಮೃದ್ಧಿ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28, 1 ಲೀಟರ್ ಗೆ ರೂ.51 ರಿಂದ 53
- ಹೋಮೋಜಿನೈಸ್ಡ್ ಶುಭಂ ಹಾಲಿನ ಅರ್ಧ ಲೀಟರ್ ಬೆಲೆ ರೂ.25ರಿಂದ 27 ಆದ್ರೇ, 1 ಲೀಟರ್ ಬೆಲೆ ರೂ.49 ರಿಂದ 51
- ಸಂತೃಪ್ತಿ ಹಾಲಿನ ಬೆಲೆ ಅರ್ಧ ಲೀಟರ್ ರೂ.28ರಿಂದ 30ಕ್ಕೆ, 1 ಲೀಟರ್ ಬೆಲೆ ರೂ.55 ರಿಂದ ರೂ.57
- ಶುಭಂ ಗೋಲ್ಡ್ ಹಾಲು ಅರ್ಧ ಲೀಟರ್ ಗೆ ರೂ.26ರಿಂದ 28ಕ್ಕೆ ಏರಿಕೆಯಾದ್ರೇ, 1 ಲೀಟರ್ ಹಾಲಿನ ಬೆಲೆ ರೂ.49ರಿಂದ 51
- ಡಬಲ್ ಟೋನ್ಡ್ ಹಾಲಿನ ಬೆಲೆ ಅರ್ಧ ಲೀಟರ್ ಗೆ 21 ರೂನಿಂದ 23ಕ್ಕೆ, 1 ಲೀಟರ್ ಬೆಲೆ ರೂ.41ರಿಂದ 43



