ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ ಪ್ರಕಟ; ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ಮಳೆ..!!!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಬೆಂಗಳೂರು: ಈ ತೀವ್ರ ಬರ, ಬುಸಿಲು, ಬಿಸಿ‌ಗಾಳಿ, ಅಂತರ್ಜಲ ಮಟ್ಟ ಕುಸಿತದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿನ 2024ರ ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆಯನ್ಬು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದ್ದು, ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ 2024ರ ಏಪ್ರಿಲ್ 15 ರಂದು ವರದು ಪ್ರಕಾರ, 2024ರಲ್ಲಿ ದೀರ್ಘಾಕಾಲಿನ ಮುಂಗಾರು (ಜೂನ್-ಸೆಪ್ಟೆಂಬರ್) ಮಳೆ ಮುನ್ಸೂಚನೆ ನೀಡಿದೆ ಈ ವರದಿ ಪ್ರಕಾರ ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಲಿದೆ ಎಂದಿದೆ.

ಮುಂಗಾರು ಮಳೆ ಮುನ್ಸೂಚನೆಯ ಮುಖ್ಯಾಂಶಗಳು: 2024ರ ಮುಂಗಾರು (ಜೂನ್ ಸೆಪ್ಟೆಂಬರ್) ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ಶೇಕಡಾ (+5%) ರಷ್ಟು ವ್ಯತ್ಯಯದೊಂದಿಗೆ ಶೇಕಡಾ 106 ರಷ್ಟು ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದೆ. ಈ ಅವಧಿಗೆ ದೇಶದ ದೀರ್ಘಾವಧಿ (1971-2020) ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂ.ಮೀ ನಷ್ಟಿದೆ.

ಮುಂಗಾರು (ಜೂನ್ – ಸೆಪ್ಟೆಂಬರ್) ಮಳೆ ಮುನ್ಸೂಚನೆ ಅನ್ವಯ ದೇಶದಾದ್ಯಂತ (ದೀರ್ಘಾವಧಿ ಸರಾಸರಿ ಶೇಕಡಾ 104 -110 ರಷ್ಟು) ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ದೇಶದಾದ್ಯಂತ ಕಾಲೋಚಿತ (ಜೂನ್ ನಿಂದ ಸೆಪ್ಟೆಂಬರ್) ಮಳೆಯ ಐದು ವರ್ಗದ ಸಂಭವನೀಯತೆಯ ಮುನ್ಸೂಚನೆಗಳು ನೈಋತ್ಯ ಮಾನ್ಸೂನ್ ಕಾಲೋಚಿತ ಮಳೆಯ ಹೆಚ್ಚಿನ ಸಂಭವನೀಯತೆ (61%) ಸಾಮಾನ್ಯಕ್ಕಿಂತ (>104% LPA) ಎಂದು ಸೂಚಿಸಿದೆ.

ಬಹು ಆಯಾಮದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಹಾಗೂ ಹವಾಮಾನ ಮಾದರಿಗಳ ಅನ್ವಯ ಪ್ರಸ್ತುತ ಎಲ್ ನಿನೊ ಪರಿಸ್ಥಿತಿ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಮಾನ್ಸೂನ್ ಋತುವಿನ ಆರಂಭಿಕ ಭಾಗ ಮತ್ತು ಲಾನಿನಾ ಪರಿಸ್ಥಿತಿಗಳು ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ.

*ಪ್ರಸ್ತುತ ಹಿಂದೂ ಮಹಾಸಾಗರದಲ್ಲಿನ ದ್ವಿಧ್ರುವಿಯ (Indian Ocean Dipole -IOD) ಪರಿಸ್ಥಿತಿಗಳು ತಟಸ್ಥವಾಗಿದ್ದು, ಹವಾಮಾನ ಮುನ್ಸೂಚನೆ ಮಾದರಿಗಳ ಅನ್ವಯ ನೈಋತ್ಯ ಮಾನ್ಸೂನ್ ಋತುವಿನ ನಂತರದ ಭಾಗದಲ್ಲಿ ಧನಾತ್ಮಕ (+) IOD ಪರಿಸ್ಥಿತಿಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ.

ಕಳೆದ ಮೂರು ತಿಂಗಳುಗಳಲ್ಲಿ (ಜನವರಿ ಯಿಂದ ಮಾರ್ಚ್, 2024) Northern hemisphere ಹಿಮದ ಹೊದಿಕೆ ಪ್ರಮಾಣವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. Northern hemisphere ಮತ್ತು ಯುರೇಷಿಯಾದ ಮೇಲೆ ಚಳಿಗಾಲ ಮತ್ತು ವಸಂತಕಾಲದ ಹಿಮದ ಹೊದಿಕೆಯ ವ್ಯಾಪ್ತಿಯು ನಂತರದ ಭಾರತೀಯ ಬೇಸಿಗೆ ಮಾನ್ಸೂನ್ ಮಳೆಯೊಂದಿಗೆ ಸಾಮಾನ್ಯವಾಗಿ ವಿಲೋಮ ಸಂಬಂಧವನ್ನು ಹೊಂದಿದೆ.

 

ರಾಜ್ಯಕ್ಕೆ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆ.ಮೀ ರಷ್ಟಿದೆ. ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ – 2024 ಅನ್ವಯ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದೆ. ಮುಂಗಾರು ಅವಧಿಯ ಮಳೆ ಮುನ್ಸೂಚನೆಯನ್ನು ಚಿತ್ರ -1 ರಲ್ಲಿ ನೀಡಿದೆ.

ರಾಜ್ಯದ ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ಜೂನ್‌ನಲ್ಲಿ 19.9 ಸೆಂ.ಮೀ, ಜುಲೈನಲ್ಲಿ 27.1 ಸೆಂ.ಮೀ. ಆಗಸ್ಟ್‌ನಲ್ಲಿ 22 ಸೆಂ.ಮೀ ಹಾಗೂ ಸೆಪ್ಟೆಂಬರ್‌ನಲ್ಲಿ 16.1 ಸೆಂ.ಮೀ ನಷ್ಟಿದ್ದು ಒಟ್ಟಾರೆ ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 85.2 ಸೆಂ.ಮೀ ನಷ್ಟಿದೆ. ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ವಾರ್ಷಿಕ ಮಳೆಯ 74% ಕೊಡುಗೆ ನೀಡುತ್ತದೆ. 115.3 ಸೆಂಟಿಮೀಟರ್ ಇರಲಿದೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *