Connect with us

Dvgsuddi Kannada | online news portal | Kannada news online

ರಾಜ್ಯದ 10 ಮಹಾನಗರ ಪಾಲಿಕೆಯಲ್ಲಿ 1,433 ಹುದ್ದೆ ಭರ್ತಿಗೆ ಸರ್ಕಾರ ಆದೇಶ; ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 119 ಹುದ್ದೆ ಭರ್ತಿಗೆ ಅವಕಾಶ…!

ದಾವಣಗೆರೆ

ರಾಜ್ಯದ 10 ಮಹಾನಗರ ಪಾಲಿಕೆಯಲ್ಲಿ 1,433 ಹುದ್ದೆ ಭರ್ತಿಗೆ ಸರ್ಕಾರ ಆದೇಶ; ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 119 ಹುದ್ದೆ ಭರ್ತಿಗೆ ಅವಕಾಶ…!

ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ 1,433 ಪೌರ ಕಾರ್ಮಿಕ ಹುದ್ದೆ ಭರ್ತಿಗೆ ಸರ್ಕಾರ ಕರ್ನಾಟಕ ರಾಜ್ಯಪತ್ರದಲ್ಲಿ ಆದೇಶ ಮಾಡಿದೆ. ಈ ಮೂಲಕ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿಯೂ 119 ಹುದ್ದೆ ಭರ್ತಿಗೆ ಆದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ರಾಜ್ಯಪತ್ರದಲ್ಲಿ ಏನು ಇದೆ..?: ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ (ಬಿ.ಬಿ.ಎಂ.ಪಿ. ಹೊರತುಪಡಿಸಿ) ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಹೊಸದಾಗಿ ಸೃಜಿಸಿ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ: ನಅಇ 171 ಎಂಎನ್‌ಇ 2022(ಇ), ದಿನಾಂಕ 09.03.2023 ಕ್ಕೆ ದಿನಾಂಕ 27.10.2023 ರಂದು ಹೊರಡಿಸಿರುವ ಸೇರ್ಪಡೆ ಆದೇಶವನ್ನು ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

ಎ) ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಲ್ಲಿ ನೇರಪಾವತಿ / ದಿನಗೂಲಿ | ಕ್ಷೇಮಾಭಿವೃದ್ಧಿ ಅಧಿನಿಯಮ | ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಒಟ್ಟು 1433 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಸೃಜಿಸಿದ್ದು, ಈ ಹುದ್ದೆಗಳ ನೇಮಕಾತಿಗಾಗಿ ಇರುವ ವಯೋಮಿತಿಯನ್ನು 55 ವರ್ಷಕ್ಕೆ ಹೆಚ್ಚಿಸುವುದು.

ಬಿ) ಸದರಿ 1433 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಬೇಕಾದರೆ ಸಮತಳ ಮೀಸಲಾತಿಯಡಿ ಕನ್ನಡ ಮಾಧ್ಯಮ, ಗ್ರಾಮೀಣ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆಂದು ಮೀಸಲಾದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಈ ಮೀಸಲಾದ ಹುದ್ದೆಗಳಿಗೆ ಉಳಿದ ಅರ್ಹರಿರುವ ಪೌರಕಾರ್ಮಿಕರುಗಳನ್ನು ಪರಿಗಣಿಸುವುದು.

ಸಿ) ಸದರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ವೃಂದಕ್ಕೆ ಮೀಸಲಿರಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳು ಲಭ್ಯವಾಗದಿದ್ದ ಪಕ್ಷದಲ್ಲಿ ಈ ಮೀಸಲಾದ ಹುದ್ದೆಗಳಿಗೆ ಉಳಿದ ಅರ್ಹರಿರುವ ಅಭ್ಯರ್ಥಿಗಳನ್ನು ಪರಿಗಣಿಸುವುದು.

ಈ ತಿದ್ದುಪಡಿ ಆದೇಶವನ್ನು ದಿನಾಂಕ 24.03.2023 ರ ಸಚಿವ ಸಂಪುಟ ಸಭೆಯ ವಿಷಯ ಸಂಖ್ಯೆ: ಸಿ 250/2023 ರ ಅನುಮೋದನೆಯನ್ವಯ ಹೊರಡಿಸಲಾಗಿದೆ. ಮುಂದುವರೆದು, ಸದರಿ 1433 ಸಂಖ್ಯಾತಿರಿಕ್ತ ಹುದ್ದೆಗಳನ್ನು 10 ಮಹಾನಗರ ಪಾಲಿಕೆಗಳಿಗೆ ಈ ಕೆಳಕಂಡಂತೆ ಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ.

  • 10 ಮಹಾನಗರ ಪಾಲಿಕೆಗಳಲ್ಲಿನ ಹುದ್ದೆಗಳ ವಿವರ
  • ಮೈಸೂರು – 252 ಹುದ್ದೆ
  • ಹುಬ್ಬಳ್ಳಿ- ಧಾರವಾಡ 252
  • ಮಂಗಳೂರು – 134
  • ಬೆಳಗಾವಿ – 134
  • ದಾವಣಗೆರೆ – 119
  • ತುಮಕೂರು – 87
  • ಶಿವಮೊಗ್ಗ – 89
  • ವಿಜಯಪುರ – 93
  • ಕಲಬುರಗಿ – 152
  • ಬಳ್ಳಾರಿ – 121
  • ಒಟ್ಟು 1,433 ಹುದ್ದೆಗಳ ಭರ್ತಿ ನಡೆಯಲಿದೆ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top