ಬೆಂಗಳೂರು: ದೇಶದಾದ್ಯಂತ 7 ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇಂದಿನಿಂದಲೇ (ಮಾ.16) ನೀತಿ ಸಂಹಿತೆ ಜಾರಿಯಾಗಲ್ಲಿದೆ. ರಾಜ್ಯದಲ್ಲಿ ಎರಡು ಹಂತದ ಮತದಾನ ನಡೆಯಲಿದ್ದು, ತಲಾ 14 ಕ್ಷೇತ್ರಗಳಲ್ಲಿ 2 ಹಂತದಲ್ಲಿ ನಡೆಯಲಿದೆ. ಅಂದರೆ ಚುನಾವಣೆ ಪ್ರಕ್ರಿಯೆಯ ಎರಡು ಮತ್ತು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಜೂನ್ 04 ರಂದು ಪ್ರಕಟವಾಗಲಿದೆ.
ರಾಜ್ಯದ ಮೊದಲ ಹಂತ
- ಮತದಾನ ದಿನಾಂಕ ಏಪ್ರಿಲ್ 26
- ಲೋಕಸಭಾ ಕ್ಷೇತ್ರಗಳು: ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು-ಕೊಡಗು, ಚಾಮರಾಜ ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ
- ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟ- ಮಾರ್ಚ್ 28
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏ04
- ನಾಮಪತ್ರಗಳ ಪರಿಶೀಲನೆ ದಿನಾಂಕ ಏ 05
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏ 08
ಎರಡನೇ ಹಂತ ಮತದಾನ ದಿನಾಂಕ ಮೇ 7
- ಲೋಕಸಭಾ ಕ್ಷೇತ್ರಗಳು: ಬೆಳಗಾವಿ, ಬೀದರ್, ಕಲಬುರಗಿ, ಚಿಕ್ಕೋಡಿ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾವೇರಿ, ಧಾರವಾಡ,ಶಿವಮೊಗ್ಗ, ದಾವಣಗೆರೆ
- ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟ ಏ 12
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏ19
- ನಾಮಪತ್ರಗಳ ಪರಿಶೀಲನೆ ದಿನಾಂಕ ಏ 20
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏ 22
- ಫಲಿತಾಂಶ ಜೂನ್ 04 ರಂದು ಪ್ರಕಟ



