ಬೆಂಗಳೂರು : ಕೊರೊನಾ ಡೌನ್ ನಿಂದಾಗಿ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದೆ. ಇದೇ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಬೇಡಿಕೆ ಈಡೇರಿಸುವುದು ಕಷ್ಟ. ಸರ್ಕಾರಕ್ಕೆ ಹಣಕಾಸಿನ ಮುಗ್ಗಟ್ಟಿದೆ. ಸರ್ಕಾರ ಸಾರಿಗೆ ನೌಕರರ ಹಿತ ಕಾಯುತ್ತದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸೋದು ಕಷ್ಟ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಾರಿಗೆ ನೌಕರರನ್ನು ಸಾರಿಗೆ ನೌಕರರ ವಿವಿಧ ಯೂನಿಯನ್ ಗಳ ಜತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಸರ್ಕಾರ ಸಾರಿಗೆ ನೌಕರರ ಹಿತ ಕಾಯುತ್ತದೆ. ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ. ಹಠ ಹಿಡಿದು ಪ್ರತಿಭಟನೆ ಮಾಡೋದು ಸರಿಯಲ್ಲ. ಕಳೆದ ಒಂದೂವರೆ ಗಂಟೆಯಿಂದ ಸಭೆ ನಡೆಯುತ್ತಿದ್ದು, ಸರ್ಕಾರ ಮತ್ತು ಸಾರಿಗೆ ಇಲಾಖೆಯ ನೌಕರರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ.



