ಬೆಂಗಳೂರು: ನಾಡಿನೆಲ್ಲಡೆ ಸಂಭ್ರಮದ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕಚೇರಿಗಳಲ್ಲಿ, ಮನೆಗಳಲ್ಲಿ, ವಾಹನಗಳಿಗೆ ಆಯುಧ ಪೂಜಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ksrtc) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (bmtc) ಆಯುಧ ಪೂಜೆಗೆ ಒಂದು ವಾಹನಕ್ಕೆ ಕೇವಲ 100 ರೂಪಾಯಿ, ಇಲಾಖೆಗೆ ಕಾರಿನ ಪೂಜೆಗೆ 40 ಕೊಟ್ಟಿದೆ. ಇದು ನೌಕರರನ್ನು ಚಿಂತೆಗೆ ಕಾರಣವಾಗಿದ್ದು, 100 ರೂ.ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎನ್ನುವಂತಾಗಿದೆ.
ಸಾರಿಗೆ ಆಡಳಿತವು ಒಂದು ಬಸ್ಸಿಗೆ 100 ರೂಪಾಯಿಗಳನ್ನು ಮಾತ್ರ ಆಯುಧ ಪೂಜೆಗಾಗಿ ನೀಡಿದ್ದು, ಚಾಲಕ ಮತ್ತು ನಿರ್ವಾಹಕರು ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ. ಈಗಾಲೇ ಬೆಲೆ ಏರಿಕೆಯಿದ ಸಂಕಷ್ಟ ಅನುಭವಿಸುತ್ತಿದ್ದು, ಅದರಲ್ಲೂ ಹಬ್ಬದ ದಿನಗಳಲ್ಲಿ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟು ದರವಿದೆ. ಅಂತಹದರಲ್ಲಿ ಒಂದು ಬಸ್‌ಗೆ ಕೇವಲ 100 ರೂ. ನೀಡಿ ಪೂಜೆ ಮಾಡೋದು ಹೇಗೆ..? ಸಾರಿಗೆ ಇಲಾಖೆ ಕೊಟ್ಟ ಹಣಕ್ಕೆ ಅಚ್ಚರಿಕೊಂಡ ಸಿಬ್ಬಂದಿ, 100 ರೂ.ಗಳಿಗೆ ಒಂದು ಮಾರು ಹೂವು ಕೂಡ ಬರುವುದಿಲ್ಲ, ಇನ್ನು ನಾವು ಹಣ ಹಾಕಿ ಪೂಜೆ ಮಾಡೋಕೆ ಸರಿಯಾಗಿ ಸಂಬಳವಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.



