ಬೆಂಗಳೂರು: 6ನೇ ವೇತನ ಆಯೋಗದ ಅನ್ವಯ ವೇತನಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ 8 ನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ಕು ನಿಗಮದಿಂದ ಇದುವರೆಗೆ ಒಟ್ಟು 152 ಕೋಟಿ ನಷ್ಟ ಉಂಟಾಗಿದೆ.
ಕಳೆದ ಏ.07ರಿಂದ ರಾಜ್ಯದಾದ್ಯಂತ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ನೌಕರರ ಪ್ರತಿಭಟನೆಯಿಂದ ಸಾರಿಗೆ ಇಲಾಖೆ ನಾಲ್ಕು ನಿಗಮಗಳು ನಷ್ಟ ಅನುಭವಿಸುತ್ತಿವೆ. ksrtc 70 ಕೋಟಿ, bmtc 20 ಕೋಟಿ, neksrtc 30.5 ಕೋಟಿ , nwksrtc 31.5 ಕೋಟಿ ಸೇರಿ ಒಟ್ಟು 152 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಕೆಎಸ್ ಆರ್ ಟಿಸಿ ಮಾಹಿತಿ ನೀಡಿದೆ.