ಬೆಂಗಳೂರು: ನಾಳೆಯೂ ಕೂಡ ಬಸ್ ಗಳು ರಸ್ತೆ ಇಳಿಯಲ್ಲ. ಸಾರಿಗೆ ನೌರರ 9 ಬೇಡಿಕೆ ಈಡೇರಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ 9 ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಆದರೆ ನಮ್ಮ 9 ಬೇಡಿಕೆಯಲ್ಲಿ 8 ಈಡೇರಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆ ಬೇಡಿಕೆ ಬಗ್ಗೆ ನಮಗೆ ತೃಪ್ತಿ ಇಲ್ಲ. ಹೀಗಾಗಿ 6ನೇ ವೇತನ ಆಯೋಗದ ಅನ್ವಯ ವೇತನ ನೀಡಬೇಕು. ರಾಜ್ಯ 72 ನಿಗಮದ ಸಿಬ್ಬಂದಿಗೆ ಎಷ್ಟು ವೇತನ ನೀಡಲಾಗುತ್ತಿದೆ. ಸಾರಿಗೆ ನೌಕರಿಗೆ ಎಷ್ಟು ವೇತರನ ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಪರಿಶೀಲನೆ ಮಾಡಲಿ ಎಂದರು.
ಸಿಎಂ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ. ಈಗ ಆಡಳಿತ ಪಕ್ಷದಲ್ಲಿ ಇದ್ದೀರಿ. ನಮ್ಮ ಬೇಡಿಕೆ ಈಡೇರಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೇತನ ತಾರತಮ್ಯ ನೀತಿ ಸರಿಯಲ್ಲ ಎಂದರು.
ಕೆಲಸ ಮಾಡುವವರಿಗೆ ಸರಿಯಾದ ಕೆಲಸ, ವೇತನ ನೀಡುತ್ತಿಲ್ಲ. ಈಗ ನಿವೃತ್ತಿ ನೌಕರರನನ್ನು ಕರೆಸಿ ಕೆಲಸ ಮಾಡಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.



