ಚಾಮರಾಜನಗರ: ಮಧ್ಯಾಹ್ನ ಕೆಎಸ್ ಆರ್ ಟಿಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 50ಕ್ಕೂ ಹೆಚ್ಚು ಗಾಯಗೊಂಡ ಘಟನೆ ಜಿಲ್ಲೆಯ ಪಿ.ಜಿ ಪಾಳ್ಯ ಬಳಿ ನಡೆದಿದೆ.
ವೃದ್ಧೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪಿ.ಜಿ ಪಾಳ್ಯದಿಂದ ಮಾಳಿಗನತ್ತ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಹಳ್ಳದ ಬಳಿ ಆಕ್ಸಲ್ ಕಟ್ ಆಗಿ ಉರುಅಲಿ ಬಿದ್ದಿದೆ. ಬಸ್ ನಲ್ಲಿ 60 ಪ್ರಯಾಣಿಕರಿದ್ದರು. ಪ್ರಯಾಣಿಕರನ್ನು ಅಲ್ಲಿದ್ದ ಸಾರ್ವಜನಿಕರು ಬಸ್ಸಿನ ಗಾಜು ಹೊಡೆದು ಹೊರಗೆ ಕರೆದುಕೊಂಡಿದ್ದಾರೆ.