ಬೆಂಗಳೂರು: ಇಂದಿನ ಸ್ವಾತಂತ್ರ್ಯ ದಿನದಿಂದ ಗಣೇಶ ಹಬ್ಬದವರೆಗೆ ಕೆಎಂಎಫ್ ನಂದಿನಿ ಸಿಹಿ ಉತ್ಸವ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ಗ್ರಾಹಕರಿಗೆ ಎಲ್ಲಾ ಶ್ರೇಣಿಯ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. 20ರಷ್ಟು ನೇರ ರಿಯಾಯಿತಿ ಘೋಷಿಸಿದೆ.
ಆಗಸ್ಟ್ 15 ರಿಂದ ಸೆಪ್ಟಂಬರ್ 20ರವರೆಗೆ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಲ್ಲದ ಪೇಡ, ಸ್ಪೆಷಲ್ ಹಾಲಿನ ಬರ್ಫಿ, ಚಾಕೊಲೇಟ್ ಕುಕೀಸ್, ಕಡಲೆ ಬೀಜ, ಬೆಲ್ಲದ ವಿಶೇಷ ನಂದಿನಿ ಕೋವಾ ,ಕೋವಾ ಕಡಲೆ ಮಿಠಾಯಿ ಲೋಕಾರ್ಪಣೆ ಮಾಡಿದರು.
ಹಾಲಿನ ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಡ್ರೈ ಫ್ರೂಟ್ಸ್, ಮೈಸೂರು ಪಾಕ್, ಚಾಕೊಲೇಟ್ ಬರ್ಫಿಗಳು, ಕುಂದಾ, ಜಾಮೂನು, ರಸಗುಲ್ಲ, ಸಿರಿಧಾನ್ಯ ಹಾಲಿನ ಪುಡಿ ಮೊದಲಾದವು ಶೇಕಡ 20ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ.