ಕೊಡಗು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಜವಾನ/ಸೇವಕ ವೃಂದದ 30 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಕೊಡಗು ಜಿಲ್ಲಾ ನ್ಯಾಯಾಲಯದ https://kodagu.dcourts.gov.in/notice-category/recruitments ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ದಿನಾಂಕ: ನ.10 ರಿಂದ ಡಿಸೆಂಬರ್ 10ರ ರಾತ್ರಿ 11.59 ರವರೆಗೆ ಸಲ್ಲಿಸಬಹುದು. ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ; ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಕನ್ನಡ ಓದಲು ಬರೆಯಲು ಬರಬೇಕು. ಆಯ್ಕೆ; ನೇರ ನೇಮಕಾತಿ ಮೂಲಕ ನಡೆಯಲಿದೆ. 1:10 ಮೆರಿಟ್ ಅನುಪಾತದಲ್ಲಿ ಆಯ್ಕೆ ನಡೆಯಲಿದೆ. ವಯೋಮಿತಿ; ಕನಿಷ್ಠ 18, ಗರಿಷ್ಠ 35, ಅರ್ಜಿ ಶುಲ್ಕ; ಎಸ್ ಸಿ, ಎಸ್ ಟಿ ಗೆ ಯಾವುದೆ ಶುಲ್ಕವಿಲ್ಲ, ಹಿಂದುಳಿದ ವರ್ಗಗಳಿಗೆ 150, ಸಾಮಾನ್ಯ ವರ್ಗಕ್ಕೆ 300, ಮಾಸಿಕ ವೇತನ; 17,000ದಿಂದ 28,950 ರೂ. ನಿಗದಿಪಡಿಸಲಾಗಿದೆ.



