ಹುಬ್ಬಳ್ಳಿ: ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳಿ-ಚಿತ್ರದುರ್ಗ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಏ.10 ರಿಂದ ಆರಂಭವಾಗಲಿದೆ. ಈ ಮೂಲಕ ಮಧ್ಯ ಕರ್ನಾಟಕ ಭಾಗದಿಂದ ವಾಣಿಜ್ಯ ನಗರಿ ಸಂಪರ್ಕಕ್ಕೆ ಅನುಕೂಲವಾಗಲಿದೆ.
ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಚಿಕ್ಕಜಾಜೂರು ಮೂಲಕ ಸಾಗುವ ರೈಲು ಏಪ್ರಿಲ್ 10ರಿಂದ ಸಂಚಾರ ಆರಂಭಿಸಲಿದೆ ಪತ್ರಿಕಾ ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ತಿಳಿಸಿದೆ.
ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್ ಪ್ರೆಸ್ 07347/07348 ಪ್ರತಿ ದಿನ ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ವಯಾ ಚಿಕ್ಕಜಾಜೂರು ನಡುವೆ ಸಂಚಾರ ನಡೆಸಲಿವೆ. ಈ ರೈಲು 12 ಬೋಗಿಗಳನ್ನು ಒಳಗೊಂಡಿದೆ. ರೈಲು ನಂಬರ್ 07347 ಹುಬ್ಬಳ್ಳಿ-ಚಿತ್ರುದುರ್ಗ ಪ್ರತಿದಿನ ಹುಬ್ಬಳ್ಳಿಯಿಂದ 7.15ಕ್ಕೆ ಹೊರಡಲಿದ್ದು, ಚಿತ್ರದುರ್ಗಕ್ಕೆ 13.35ಕ್ಕೆ ತಲುಪಲಿದೆ.ರೈಲು ನಂಬರ್ 07348 ಚಿತ್ರದುರ್ಗದಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿರುವ ರೈಲು ಹುಬ್ಬಳ್ಳಿ ನಿಲ್ದಾಣವನ್ನು ರಾತ್ರಿ 9.30ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಈ ರೈಲು ಸಂಚಾರ ನಡೆಸಲಿದೆ.
ನೈರುತ್ಯ ರೈಲ್ವೆಯು 10.04.2021ರಿಂದ ರೈ. ಸಂ. 07347/07348 ಹುಬ್ಬಳ್ಳಿ- ಚಿತ್ರದುರ್ಗ- ಹುಬ್ಬಳ್ಳಿ ಆರಕ್ಷಣಾರಹಿತ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಓಡಿಸಲಿದೆ.@SWRRLY will run T. No. 07347/07348 #Hubballi– #Chitradurga– Hubballi Unreserved Express Special with normal fare with effect from 10.04.2021. pic.twitter.com/qJAQ5wdVdL
— DRM Hubballi (@drmubl) April 5, 2021