ಬೆಂಗಳೂರು: 01 ಏಪ್ರಿಲ್ 2019ರ ನಂತರ ನಿಮ್ಮ ವಾಹನ ನೋಂದಣಿ ಮಾಡಿಕೊಂಡಿದ್ರೆ ಎಲ್ಲಾ ವಿಧದ ವಾಹನಗಳಿಗೆ ನವೆಂಬರ್ 17ರ ಒಳಗಾಗಿ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್ (HSRP) ಅಳವಡಿಸುವುದು ಕಡ್ಡಾಯವಾಗಿದೆ.
ವಾಹನ ಮಾಲೀಕರು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಪಡೆಯಲು ಕರ್ನಾಟಕ ಸಾರಿಗೆ ಇಲಾಖೆವೆಬ್‍ಸೈಟ್ https://transport.karnataka.gov.in ಅಥವಾ www.siam.in ಭೇಟಿ ನೀಡಿ, ನಿಮ್ಮ ವಾಹನದ ಮಾಹಿತಿಗಳನ್ನು ಭರ್ತಿ ಮಾಡಬೇಕು. ಹತ್ತಿರದ ಡೀಲರ್ ಸ್ಥಳವನ್ನು ನಿಗದಿ ಮಾಡಿಕೊಂಡು, ಆನ್‍ಲೈನ್ ಮೂಲಕವೇ ಹಣ ಪಾವತಿಸಿಬೇಕು. ನಂತರ ವಾಹನ ಮಾಲೀಕರ ಮೊಬೈಲ್ ನಂಬರ್ ಗೆ ಬರುವ ಒಟಿಪಿ ಮಾಹಿತಿ ನಮೂದಿಸಿ, ದಿನಾಂಕ ಹಾಗೂ ಸಮಯ ನಿಗದಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು.
ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ತಯಾರಿಕಾ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ ಗಳು ಮಾತ್ರ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಹೊಂದಿರುತ್ತಾರೆ. ವಾಹನ ಮಾಲೀಕರು ವೈಬ್‍ಸೈಟ್ ಮೂಲಕವೇ ನೊಂದಣಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ವಾಹನಗಳಿಗೆ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ದಾವಣಗೆರೆ: ಬೈಕ್ ಕಳ್ಳತನ ಆರೋಪಿ ಬಂಧನ; 1.45 ಲಕ್ಷ ಮೌಲ್ಯದ 4 ಬೈಕ್ ವಶ



