ಬೆಂಗಳೂರು: ತೋಟಗಾರಿಕೆ ವಿಶ್ವವಿದ್ಯಾನಿಲಯಕ್ಕೆ ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನ ತಡೆಹಿಡಿದಿದ್ದಕ್ಕೆ ಗರಂ ಆಗ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಹಕ್ಕುಚ್ಯುತಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸದಸ್ಯರ ನಾಮನಿರ್ದೇಶಕ್ಕೆ ಸ್ವತಃ ನಾನೇ ಪತ್ರ ಕೊಟ್ಟ ಮೇಲೂ, ನಾಮನಿರ್ದೇಶನ ತಡೆ ಹಿಡಿದಿದ್ಯಾಕೆ ಎಂದು ಪ್ರಶ್ನಿಸಿದರು.
ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಹನುಮಂತ ನಿರಾಣಿ ಮಾತನಾಡಿ, ಬಾಗಲಕೋಟೆಯ ರಾಜ್ಯದ ಏಕೈಕ ತೋಟಗಾರಿಕೆ ವಿಶ್ವವಿದ್ಯಾನಿಲಯಕ್ಕೆ ನನ್ನನ್ನು ನಾಮನಿರ್ದೇಶನ ಮಾಡಲಾಗಿತ್ತು. ಇಲ್ಲಿ ಒಟ್ಟು 13 ಮಂದಿಯನ್ನು ನಾಮನಿರ್ದೇಶನ ಮಾಡಲಾಗಿದೆ. ಇದರಲ್ಲಿ ನನ್ನನ್ನು ಸಹ ಒಬ್ಬ. ಪ್ರತಿಯೊಂದು ವಿವಿಗೆ ವಿಧಾನಪರಿಷತ್ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆಂಬ ನಿಯಮವಿದೆ. ಆದರೂ ನನ್ನ ನೇಮಕಾತಿಯನ್ನು ಏಕೆ ತಡೆ ಹಿಡಿಯಲಾಗಿದೆ ಎಂದು ಪ್ರಶ್ನಿಸಿದರು.
ಯಶಸ್ವಿನಿ ಯೋಜನೆಗೆ ಹೊಸದಾಗಿ ನೋಂದಣಿ, ನವೀಕರಣಕ್ಜೆ ಮಾ.31 ಕೊನೆಯ ದಿನ; 5 ಲಕ್ಷವರೆಗೆ ಚಿಕಿತ್ಸಾ ಸಹಾಯಧನ
ಎರಡು ಬಾರಿ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದೆ. ಸಾಲದಕ್ಕೆ ಎರಡು ಬಾರಿ ಸಭಾಪತಿಗಳಾದ ನೀವೇ ಪತ್ರವನ್ನು ಕೊಟ್ಟಿದ್ದೀರಿ. ವಿವಿ ಕುಲಪತಿ, ಸಂಬಂಧಪಟ್ಟ ಅಧಿಕಾರಿಗಳನ್ನು ಹತ್ತಾರು ಸಾರಿ ಭೇಟಿ ಮಾಡಿದ್ದೇನೆ. ಜನಪ್ರತಿನಿಧಿಗಳಾದ ನನ್ನ ಪರಿಸ್ಥಿತಿಯೇ ಹೀಗಾದರೆ ಬೇರೆಯವರ ಪರಿಸ್ಥಿತಿ ಇನೇನು ಎಂದು ಪ್ರಶ್ನಿಸಿದರು.
ಸಿಎಂ ಬಳಿ ಈ ಬಗ್ಗೆ ಚರ್ಚೆ ಮಾತನಾಡಬೇಕೆಂದು ಎಸ್ .ಎಸ್. ಮಲ್ಲಿಕಾರ್ಜುನ್ ಹೇಳುತ್ತಿದ್ದಂತೆ ಆಕ್ರೋಶಗೊಂಡ ಹೊರಟ್ಟಿ, ನಾನು ಹೇಳಿದ ಮೇಲೂ ನೀವು ಸಿಎಂ ಜೊತೆ ಮಾತನಾಡುವುದು ಏನು? ನೀವು ಇಂದೇ ಆದೇಶ ಮಾಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದು ಗುಡುಗಿದರು.



