Connect with us

Dvgsuddi Kannada | online news portal | Kannada news online

HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆಯ ಅಧಿಕೃತ ಆದೇಶ ಹೊರಡಿಸಿದ ಸಾರಿಗೆ ಇಲಾಖೆ ; ಮೇ 31 ಡೆಡ್ ಲೈನ್…!!

ಪ್ರಮುಖ ಸುದ್ದಿ

HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆಯ ಅಧಿಕೃತ ಆದೇಶ ಹೊರಡಿಸಿದ ಸಾರಿಗೆ ಇಲಾಖೆ ; ಮೇ 31 ಡೆಡ್ ಲೈನ್…!!

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ಫೆ.17 ರಿಂದ ಮೇ 31ರ ವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಒತ್ತಾಯ ಮೇರೆಗೆ ಮತ್ತೆ ಮೂರು ತಿಂಗಳು ಅವಧಿ ವಿಸ್ತರಿಸಲಾಗಿದೆ.

ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​ ಅವರು ಅಧಿಕೃತ ಆದೇಶವನ್ನು ಶುಕ್ರವಾರ ಹೊರಡಿಸಿದ್ದಾರೆ. ಇತ್ತೀಚೆಗೆ ಸದನದಲ್ಲಿ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದರು. ಇದೀಗ ಸಾರಿಗೆ ಇಲಾಖೆ ಅಧಿಕೃತವಾಗಿ ಗಡುವು ವಿಸ್ತರಣೆ ಮಾಡಿ ಅಧಿಕೃತವಾಗಿ ಆದೇಶಿಸಿದೆ. ಆ ಮೂಲಕ ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಾಹನ ಸವಾರರು ಮನವಿ‌ ಮಾಡಿದ್ದರು.

ನಂಬರ್‌ ಪ್ಲೇಟ್‌ ಅಳವಡಿಕೆಗೆ ಫೆಬ್ರವರಿ 17 ರ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ HSRP ನಂಬರ್ ಪ್ಲೇಟ್‌ ಅಳವಡಿಕೆ ಆಗಿರಲಿಲ್ಲ. ಇನ್ನೂ ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿಗೆ ಈ ಪ್ಲೇಟ್‌ ಅಳವಡಿಕೆ ಆಗಬೇಕಿದೆ ಎಂದು ಕಾಂಗ್ರೆಸ್‌ನ ಪರಿಷತ್‌ ಸದಸ್ಯ ಮಧು ಮಾದೇಗೌಡ ಸದನದಲ್ಲಿ ಪ್ರಸ್ತಾಪಿಸಿದ್ದರು.

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ಪ್ಲೇಟ್​​ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್‌ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. 2019ರ ಏಪ್ರಿಲ್‌ ಬಳಿಕ ಖರೀದಿ ಮಾಡಿರುವ ವಾಹನಗಳಿಗೆ ರಿಜಿಸ್ಟ್ರೇಷನ್‌ ವೇಳೆಯೇ HSRP ಪ್ಲೇಟ್ ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್‌ಗೂ ಮುನ್ನ ಖರೀದಿಸಿರುವ ಎಲ್ಲಾ ವಾಹನಗಳಿಗೂ ಅತೀ ಸುರಕ್ಷತಾ ನೋಂದಣಿ ಫಲಕ ಅಳವಡಿಕೆ ಕಡ್ಡಾಯವಾಗಿದೆ.

ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಸದ್ಯ 18 ಲಕ್ಷ ವಾಹನಗಳಿಗೆ ಮಾತ್ರ ಈ ಪ್ಲೇಟ್ ಅಳವಡಿಕೆ ಆಗಿದೆ. ಇನ್ನೂ ಒಂದು ಕೋಟಿ 82 ಲಕ್ಷ ವಾಹನಗಳಿಗೆ ಈ ಪ್ಲೇಟ್ ಅಳವಡಿಸಬೇಕಿದೆ. ಹೀಗಾಗಿ 3 ತಿಂಗಳ ವರೆಗೆ ಗಡುವು ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top